ಗುಲ್ಬರ್ಗ ರೋಟರಿ ಕ್ಲಬ್​ ಪಾಲ್​ ಹ್ಯಾರಿಸ್​ ಸಭಾಂಗಣದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳಾ ಫಲಾನುಭವಿಗಳಿಗೆ ಮಂಗಳವಾರ ಹೊಲಿಗೆ ಯಂತ್ರ ವಿತರಿಸಲಾಯಿತು. ನಂದಕಿಶೋರ ಮಳಖೇಡಕರ್​, ಡಾ.ಗೌತಮ್​ ಜಹಾಗೀರದಾರ್​, ಮಾಣಕ್​ ಪವಾರ್​, ಮಾಣಕ್​ ಮಂದಕನಳ್ಳಿ ಇತರರಿದ್ದರು. 
ರಾಜ್ಯ

ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ರೋಟರಿ ಕ್ಲಬ್​ ಆಫ್​ ಗುಲ್ಬರ್ಗ
ಕಲಬುರಗಿ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ನೇತೃತ್ವದಲ್ಲಿ ನಗರದ ರೋಟರಿ ಕ್ಲಬ್​ ಪಾಲ್​ ಹ್ಯಾರಿಸ್​ ಸಭಾಂಗಣದಲ್ಲಿ 31 ಜನ ಫಲಾನುಭವಿಗಳಿಗೆ ಮಂಗಳವಾರ ಹೊಲಿಗೆ ಯಂತ್ರ ವಿತರಿಸಲಾಯಿತು.
ಎಸ್​ಬಿಐ ಆರ್​ಸೆಟ್​ ನಿರ್ದೇಶಕ ನಂದಕಿಶೋರ್​ ಮಳಖೇಡಕರ್​ ಹೊಲಿಗೆ ಯಂತ್ರ ವಿತರಿಸಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.
ರೋಟರಿಯನ್​ ಮಣಿಲಾಲ್​ ಶಾ, ಡಾ.ಗೌತಮ್​ ಜಹಗೀರದಾರ್​, ಮಾಣಿಕ್​ ಪವಾರ್​, ಸಿಎ ಮಾಣಿಕ್​ ಮಂದಕನಳ್ಳಿ ಉಪಸ್ಥಿತರಿದ್ದರು. ರೋಟರಿ ಕ್ಲಬ್​ ಆಫ್​ ಗುಲ್ಬರ್ಗ, ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ನಾರ್ತ್​, ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ಮಿಡ್​ಟೌನ್​, ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ಸನ್​ಸಿಟಿ, ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ಸೌತ್​ ಹಾಗೂ ರೋಟರಿ ಕ್ಲಬ್​ ಆಫ್​ ದಿ ರೋಸ್​ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿಧ ರೋಟರಿ ಕ್ಲಬ್​ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ನಂತರ ಫೆಲೋಶಿಪ್​ ಕಾರ್ಯಕ್ರಮ ನಡೆಯಿತು. ಸಮಾಜ ಸೇವೆಯ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ರೋಟರಿ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಟಕರು ಹೇಳಿದರು.