Distribution of order letter at the place of counseling
ಕೋಲಾರ: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್&1, 2 ಕಾರ್ಯದರ್ಶಿ ಹಾಗೂ ದ್ವೀತಿಯ ದರ್ಜೆ ಲೆಕ್ಕ ಸಹಾಯಕ (ಎಸ್ಡಿಎ) ಸಿಬ್ಬಂದಿ ವರ್ಗಾವಣೆಯ ಕೌನ್ಸೆಂಗ್ ಮಂಗಳವಾರ ಜಿ.ಪಂ ಕಚೇರಿಯಲ್ಲಿ ನಡೆಯಿತು.
ವರ್ಗಾವಣೆ ಕೋರಿಕೆಯ ಮೇರೆಗೆ 154 ಗ್ರಾಮ ಪಂಚಾಯಿತಿಗೆ ಒಟ್ಟು 211 ಹುದ್ದೆ ಮಂಜೂರಾಗಿದ್ದು, ವರ್ಗಾವಣೆ ಕೋರಿ 45 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ ಅರ್ಹ 32 ಮಂದಿ ಕೌನ್ಸೆಲಿಂಗ್ಅನ್ನು ಜಿಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ ಅವರು ನಡೆಸಿ, ಸ್ಥಳದಲ್ಲೇ ಆದೇಶ ಪತ್ರ ವಿತರಿಸಿದರು. ಪಾರದರ್ಶಕವಾಗಿ ನಡೆದ ಕೌನ್ಸೆಲಿಂಗ್ನಲ್ಲಿ ಸಿಬ್ಬಂದಿಯೂ ಕೆಲಸ ಮಾಡಲು ಇಚ್ಚೆಯಿರುವ ಪಂಚಾಯಿತಿ ಆಯ್ಕೆ ಮಾಡಿಕೊಂಡರು.