ಚೇಳೂರು ಹೋಬಳಿಯ ರಾಮಾನುಪಡಿ ದಾಸ್ತಾನು ಮಳಿಗೆಯಲ್ಲಿ ರೈತರಿಗೆ ನೆಲಗಡಲೆ ಬಿತ್ತನೆ ಬೀಜದ ಮೂಟೆಗಳನ್ನು ವಿತರಿಸಲಾಯಿತು.ರಾಮಚಂದ್ರ, ರಾಮಾನುಪಡಿ ಸುಧಾಕರ್ ಜೀಜ್, ಕಿಟ್ಟ, ಚನ್ನ, ಪ್ರಸನ್ನ ಕುಮಾರ್, ರಾಮು ಇದ್ದರು.
ಚೇಳೂರು: ಹೋಬಳಿಯ ರಾಮಾನುಪಡಿ ದಾಸ್ತಾನು ಮಳಿಗೆಯಲ್ಲಿ ರೈತರಿಗೆ ನೆಲಗಡಲೆ ಬಿತ್ತನೆ ಬೀಜದ ಮೂಟೆಗಳನ್ನು ವಿತರಿಸಲಾಯಿತು.
ದರಖಾಸ್ತು ಸಮಿತಿ ಸದಸ್ಯ, ಕುರುಬರಹಳ್ಳಿ ವಕೀಲ ಕೆ.ಸಿ.ಚಂದ್ರಶೇಖರ್ ರೆಡ್ಡಿ ಮಾತನಾಡಿ, ಬಿತ್ತನೆ ಬೀಜ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು, ನೇರವಾಗಿ ರೈತರಿಗೆ ನೆಲಗಡಲೆ ಮೂಟೆಗಳನ್ನು ಕೃಷಿ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ.
ರೈತರಿಗೆ ಬೇಡಿಕೆ ಇರುವಷ್ಟು ನೆಲಗಡಲೆ ಬಿತ್ತನೆ ಬೀಜಗಳ ಮೂಟೆ ಸಂಗ್ರಹಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಭಾರಿ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಕೆಲ ರೈತರು ಬಿತ್ತನೆ ಬೀಜ ಹಾಕಿದ್ದಾರೆ.ಆದರೆ ಇದೀಗ ಭೂಮಿ ಒಣಗುವ ಹಂತದಲ್ಲಿ ಇದೆ. ಬೆಳೆ ಬರದಿದ್ದರೆ, ಬೆಳೆ ವಿಮೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ತೆ ಸುಮಾರು 250 ರೈತರಿಗೆ ನೆಲಗಡಲೆ ಶೆಂಗಾ ಬೀಜದ ಮೂಟೆಗಳನ್ನು ವಿತರಣೆ ಮಾಡಲಾಯಿತು.
ಚೇಳೂರು ಹಾಗೂ ಪಾತಪಾಳ್ಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಂಗಾಧರ ರೆಡ್ಡಿ, ರಾಮಚಂದ್ರ, ರಾಮಾನುಪಡಿ ಸುಧಾಕರ್ ಜೀಜ್, ಕಿಟ್ಟ, ಚನ್ನ, ಪ್ರಸನ್ನ ಕುಮಾರ್, ರಾಮು, ರಹಮತುಲ್ಲಾ, ರಫೀಕ್, ಫಕೃದ್ದೀನ್ ಇದ್ದರು.