ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್‌ನಿಂದ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಅನುರಾಧಾ ರಾವ್, ಭಾವನಾ ಶಾ, ಶಶಿಕಲಾ ಅರುಣ್, ಭುವನ ಕಶ್ಯಪ್, ಮಂಗಳಾ, ಶಿವಲಿಂಗಯ್ಯ, ಶಾಂತಮ್ಮ ಇತರರಿದ್ದರು.
- ಸಮಾಜ ಸೇವಕ ಯಶವಂತಪುರ ಶಿವಲಿಂಗಯ್ಯ
- ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ
ಸರಗೂರು: ಮಕ್ಕಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಸಮಾಜ ಸೇವಕ ಯಶವಂತಪುರ ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್ ವತಿಯಿಂದ ನೀಡಲಾದ ನೋಟ್‌ಬುಕ್‌ಗಳು ಹಾಗೂ ಅಗತ್ಯ ಕಲಿಕಾ ಸಾಮಗ್ರಿ, ವಿವಿಧ ವಿನ್ಯಾಸದ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೊದಲ ಆದ್ಯತೆ ದೊರಕಬೇಕೆಂಬ ಧ್ಯೇಯದೊಂದಿಗೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸ್ವಯಂಸೇವಕಿ ಮಂಗಳಾ ವಿಜೇಂದ್ರ ಮಾತನಾಡಿ, ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ಶೈಕ್ಷಣಿಕ ವಾತಾವರಣವನ್ನು ರೂಪಿಸಿದರೆ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ. ಕಡ್ಡಾಯ ಶಿಕ್ಷಣದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿದಾಗ ಮಾತ್ರ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅನುರಾಧಾ ರಾವ್, ಭಾವನಾ ಶಾ, ಶಶಿಕಲಾ ಅರುಣ್, ಭುವನ ಕಶ್ಯಪ್, ರೇಣುಕಾ ಕೌಜಲಗಿ, ಸಹನಾ ಗೌಡ, ಕೃಷ್ಣ, ಕಾಂತರಾಜ್, ಇಂದಿರಾ ಈಶ್ವರ್, ಭರತ್‌ಗೌಡ, ಶಾಲೆ ಮುಖ್ಯ ಶಿಕ್ಷಕಿ ಶಾಂತಮ್ಮ, ಅತಿಥಿ ಶಿಕ್ಷಕರಾದ ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಸಿದ್ದರಾಜು, ಹೇಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ನಂಜಪ್ಪ, ಮಾಜಿ ಅಧ್ಯಕ್ಷ ಮಹೇಂದ್ರ, ರತ್ನಯ್ಯ ಮಳಲಿ, ಬಸವರಾಜು ಚಿಲಕಹಳ್ಳಿ, ರಾಜು ಇತರರಿದ್ದರು.