ಕನಕಪುರ ರೋಟರಿ ಸಂಸ್ಥೆ ವತಿಯಿಂದ ತಿಗಳರಹೊಸಹಳ್ಳಿಯಲ್ಲಿ ಮಹಿಳೆಯರಿಗೆ ಉಚಿತ ಹಸು ವಿತರಣೆ ಮಾಡಲಾಯಿತು. ರೋಟರಿ ಸಂಸ್ಥೆಯ ಶ್ರೀಧರ್, ಸಿದ್ದರಾಜು, ಭಾನುಪ್ರಕಾಶ್, ಪ್ರಭಾಕರ್, ಪ್ರಕಾಶ್ ಇದ್ದ್ದರು.  
ರಾಜ್ಯ

ಸ್ವಾವಲಂಬಿ ಬದುಕಿಗಾಗಿ ಹಸು ವಿತರಣೆ

ರೋಟರಿ ಸಂಸ್ಥೆ ಸಾಮಾಜಿಕ ಸೇವೆಗಳ ಜತೆಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ 7 ಕುಟುಂಬಗಳ ಮಹಿಳಾ ಸದಸ್ಯರಿಗೆ 7 ಸೀಮೆ ಹಸುಗಳನ್ನು ಉಚಿತವಾಗಿ ವಿತರಿಸಲಾಗಿದ್ದು,

ಮಹಿಳೆಯರು ಉತ್ತಮ ಜೀವನೋಪಾಯ ಕಂಡುಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಪಾಲಕ ವಿ.ಎನ್.ಶ್ರೀಧರ್ ಹೇಳಿದರು.

ತಾಲೂಕಿನ ತಿಗಳರಹೊಸಹಳ್ಳಿ ಹಾಗೂ ಕೆಲ ಗ್ರಾಮಗಳಲ್ಲಿ 7 ಕುಟುಂಬಗಳ ಮಹಿಳಾ ಸದಸ್ಯರಿಗೆ ಸೀಮೆ ಹಸುಗಳನ್ನು ವಿತರಿಸಿ ಮಾತನಾಡಿ, ಮಹಿಳಾ ಸಬಲೀಕರಣ ಮತ್ತು ಸ್ಥಿರ ಗ್ರಾಮೀಣ ಅಭಿವೃದ್ಧಿ ಮಹತ್ವಾಂಕ್ಷೆಯೊಂದಿಗೆ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ಕೊಡುವ ಯೋಜನೆಯನ್ನು ಕನಕಪುರ ರೋಟರಿ ಅಧ್ಯಕ್ಷರಾಗಿದ್ದ ಸಿದ್ದರಾಜು ಜಾರಿಗೆ ತಂದಿದ್ದಾರೆ.
ಈ ಮೂಲಕ ಬಡ ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಜೀವನ ಕಲ್ಪಿಸಿ ಹೈನುಗಾರಿಕೆ ಮೂಲಕ ನಿರಂತರ ಆದಾಯ ತಂದುಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ರೋಟರಿ ಮಾಜಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕಳೆದ ವರ್ಷ ಇದೇ ರೀತಿ 6 ಹಸುಗಳನ್ನು ವಿತರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲೂ ಸಹ 70 ಸಾವಿರ ಬೆಲೆಬಾಳುವ ಹಸುಗಳನ್ನು ವಿತರಿಸಲಾಗಿದೆ.
ಮರಳೇಬೇಕುಪ್ಪೆ ಗ್ರಾಮದ ಇಬ್ಬರು, ಏಳಗಳ್ಳಿ, ತಾಮಸಂದ್ರ, ಬೆಟ್ಟಹಳ್ಳಿ, ಹೊಸದುರ್ಗ, ಆನಮಾನಹಳ್ಳಿ ಗ್ರಾಮದ ಮಹಿಳೆಯರಿಗೆ ತಲಾ ಒಂದು ಸೀಮೆ ಹಸು ವಿತರಿಸಲಾಗಿದೆ. ಇದು ಕೇವಲ ದಾನ ಮಾಡುವ ಕಾರ್ಯಕ್ರಮವಲ್ಲ, ಗ್ರಾಮೀಣ ಮಹಿಳೆಯರ ಸ್ವಾಭಿಮಾನದ ಬದುಕು ಮತ್ತು ದೀರ್ಘ ಕಾಲೀನ ಆರ್ಥಿಕ ಭದ್ರತೆಗೆ ಸಹಕಾರಿಯಾಗಲಿದೆ ಎಂದರು.
ರೋಟರಿ ಸಂಸ್ಥೆ ಖಜಾಂಚಿ ಭಾನುಪ್ರಕಾಶ್, ಪ್ರಭಾಕರ್, ಪ್ರಕಾಶ್, ಚಂದ್ರಪ್ರಭಾ ಸೇರಿದಂತೆ ಅನೇಕರು ಇದ್ದರು.
01 ಕೆಕೆಪಿ 5