Distribution of certificates at CM program
ವೈ.ಎನ್.ಹೊಸಕೋಟೆ: ಹೋಬಳಿಯ ಮೇಗಲಪಾಳ್ಯ ತಾಂಡಾ ದೊಡ್ಡಲಂಬಾಣಿಹಟ್ಟಿ ಗ್ರಾಮವನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕಂದಾಯ ಗ್ರಾಮವಾಗಿ ರೂಪಿಸಲಾಗಿದ್ದು, ಈಗಾಗಲೇ ಹಕ್ಕುಪತ್ರ ಮಂಜೂರಾತಿಗೆ ಸಿದ್ಧವಾಗಿದ್ದು, ಮೇ 20ರಂದು ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 20ರಂದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲಲ್ಇ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಲಂಬಾಣಿ ಹಟ್ಟಿ ಪ್ರದೇಶದ ಅರ್ಹ ಫಲಾನುಭವಿಗಳು ತಪ್ಪದೇ ಆಗಮಿಸಿ ತಮ್ಮ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ವೈ.ಎನ್.ಹೊಸಕೋಟೆ ಹೋಬಳಿಯ ರಾಜಸ್ವ ನಿರೀಕ್ಷಕ ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೋಬಳಿಯ ಸೂಲನಾಯಕನಹಳ್ಳಿ, ಚಿಕ್ಕಹಳ್ಳಿ, ನಾಗಲಾಪುರ, ಮೇಗಲಪಾಳ್ಯ ಅಂಬೇಡ್ಕರ್ ಬಡಾವಣೆ ಹಾಗೂ ರಾಮಕೃಷ್ಣಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.