ಬಸವಕಲ್ಯಾಣದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂದ ತಾಲೂಕು ಟಕ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿದರು. ತಾಲೂಕು ಅಧ್ಯಕ್ಷ ಸುಭಾಷ ರಗಟೆ, ಪ್ರಮುಖರಾದ ರೇವಣಸಿದ್ದ ಯರಬಾಗ, ಮಡಿವಾಳಪ್ಪ ಪಾಟೀಲ, ಮಹಾದೇವ ಬೇಲೂರೆ, ಜಯಪ್ರಕಾಶ ಸದಾನಂದೆ, ಪ್ರಶಾಂತ ಲಕ್ಮಾಜಿ, ರಾಮ ಮಜಗೆ ಇದ್ದರು. 
ರಾಜ್ಯ

ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ವಿತರಿಸಿ

ಪ್ರಮುಖ ಮುಖ್ಯಾಂಶಗಳು

  • ಸುಭಾಷ ರಗಟೆ ಒತ್ತಾಯ
  • ಬಸವಕಲ್ಯಾಣದಲ್ಲಿ ಮಾಸಿಕ ಸಭೆ
ಬಸವಕಲ್ಯಾಣ: ಕೃಷಿ ಇಲಾಖೆಯಿಂದ ಮುಂಗಾರು ಬೆಳೆಗಳ ಬೀಜ ಮತ್ತು ರಸಗೊಬ್ಬರ ಆದಷ್ಟು ಬೇಗ ವಿತರಣೆ ಮಾಡಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ ಒತ್ತಾಯಿಸಿದರು.
ನಗರದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನು ಕೆಲವು ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಪಾವತಿಯಾಗಿಲ್ಲ. ಸಂಬಂಧಿತರು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರೇವಣಸಿದ್ದಪ್ಪ ಯರಬಾಗ, ಮಡಿವಾಳಪ್ಪ ಪಾಟೀಲ, ಮಹಾದೇವ ಬೇಲೂರೆ, ಪ್ರಶಾಂತ ಲಕ್ಮಾಜಿ, ರಾಮ ಮಜಗೆ, ಬಸವರಾಜ ಚವರೆ, ಸುನೀಲಕುಮಾರ ಭುಜಂಗೆ, ಇಕ್ಬಾಲ್​, ಚಂದ್ರಕಾಂತ ಮೋಳಕೇರೆ, ಜಯಪ್ರಕಾಶ ಸದಾನಂದೆ, ದಯಾನಂದ ಹಳ್ಳೆ, ಮಾರುತಿ ಕುಂಬಾರೆ, ಯಶವಂತ ಪಾಟೀಲ, ಗುರುಪಾದ ಬೇಲೂರೆ, ವಿಠಲ ಸೋನಾರ ಭಾಗವಹಿಸಿದ್ದರು.