ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಿ BPL cards
ಕದರೀಪುರ: ಕೋಲಾರ ಜಿಲ್ಲೆಯಾದ್ಯಂತ ಸಾವಿರಾರು ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ವರ್ಗವಾಗಿದ್ದು, ಅವುಗಳನ್ನು ಪರಿಷ್ಕರಿಸಿ ಅರ್ಹರಿಗೆ ಮರಳಿ ಬಿಪಿಎಲ್ ಕಾರ್ಡ್ ಒದಗಿಸುವಂತೆ ಕಾಂಗ್ರೆಸ್ ಕಿಸಾನ್ ಟಕದ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರುಳಿಗೌಡ ಕೋಲಾರದಲ್ಲಿ ಬುಧವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. BPL cards
ಬಿಪಿಎಲ್ ಕಾರ್ಡ್ ಹೊಂದಲು ಇಲಾಖೆಯ ಮಾನದಂಡಗಳಿದ್ದು, ಬಿಪಿಎಲ್ ಲಾನುಭವಿಗಳನ್ನೂ ಸಹ ಎಪಿಎಲ್ಗೆ ಬದಲಾಯಿಸಿರುವುದು ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಡಕಾಗಿದೆ. ಆದ್ದರಿಂದ ಮತ್ತೊಮ್ಮೆ ಪಡಿತರ ಚೀಟಿ ಪರಿಷ್ಕರಿಸಿ ಅರ್ಹರಿಗೆ ಬಿಪಿಎಲ್ ಒದಗಿಸಬೇಕು ಹಾಗೂ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಸಿಬೇಕು ಎಂದರು.
ಬಿಪಿಎಲ್ ಕಾರ್ಡ್ ನಿಂದಾಗಿ ಬಡವರು ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾ$್ಯನ್, ಎಂಆರ್ಐ ಸ್ಕಾ$ನ್, ಅಲ್ಟ್ರಾಸೌಂಡ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಬಡ ಕುಟುಂಬಗಳು ಹಸಿವಿನಿಂದ ಮುಕ್ತವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪಡಿತರ ದೊರೆಯಲಿದೆ ಎಂದರು.
ಆಹಾರ ಮತ್ತು ನಾಗರಿಕ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಮನವಿ ಸ್ವೀಕರಿಸಿ ಮಾತನಾಡಿ, ಪಡಿತರ ಚೀಟಿಗಳನ್ನು ಮತ್ತೊಮ್ಮೆ ಪರಿಷ್ಕರಿಸಿ ಅರ್ಹ ಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಒದಗಿಸಲಾಗುವುದು, ರೈತಾಪಿ ವರ್ಗಕ್ಕೆ ಯಾವುದೇ ತೊಂದರೆಯಾಗದ ರೀತಿ ಗಮನಹರಿಸಲಾಗುವುದು ಎಂದು ಹೇಳಿದರು.