ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದಲ್ಲಿ ಮೊಹರಂ ಅಂಗವಾಗಿ ಕಳ್ಳಳ್ಳಿ ವೇಷ ಹಾಕಿ ಹರಕೆ ತೀರಿಸಿದ ಭಕ್ತರು. 
ರಾಜ್ಯ

ವೇಷಧಾರಿ ಕಳ್ಳಳ್ಳಿಗಳು

ಕನಕಗಿರಿ: ತಾಲೂಕಿನ ಮುಸಲಾಪುರದಲ್ಲಿ ಮೊಹರಂನ ಕತ್ತಲ ರಾತ್ರಿ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಕಳ್ಳಳ್ಳಿ ವೇಷಧಾರಿಗಳು ನೃತ್ಯ ಮಾಡಿ ಗಮನ ಸೆಳೆದರು. 
ಈ ಭಾಗದಲ್ಲಿ ಹರಕೆ ಹೊತ್ತ ಭಕ್ತರು 3-4 ದಿನಗಳ ಕಾಲ ಕಳ್ಳಳ್ಳಿ, ಹುಲಿ ವೇಷ ಧರಿಸುವುದು ವಾಡಿಕೆ. ಮುಖಕ್ಕೆ ಮುಖವಾಡ, ತಲೆ ಮೇಲೆ ಅಚ್ಚೊಳ್ಳಿ ಮಾದರಿಯ ಟೋಪಿಗೆ ಇರುತ್ತದೆ. 
ಮುಸಲಾಪುರ, ಓಬಳಬಂಡಿ, ಹಾಸಗಲ್, ಪರಾಪುರ ಸೇರಿ ನಾನಾ ಗ್ರಾಮಗಳಲ್ಲಿ ಸಂಚರಿಸಿದರು. ಗ್ರಾಮಗಳ ಮುಖ್ಯ ರಸ್ತೆಯ ಬದಿಯಿರುವ ವ್ಯಾಪಾರಿಗಳಿಂದ ಹಾಗೂ ಮನೆಗಳಿಂದ ವೇಷಧಾರಿಗಳ ತಂಡ ಹಣ ಸಂಗ್ರಹಿಸಿತು. 
ಜನರೂ ಸಹ ಕೈಲಾದಷ್ಟು ಹಣ ನೀಡಿ ಭಾವೈಕ್ಯತೆ ಮೆರೆದರು.