ಭಾರತದಲ್ಲಿನ ಇಟಲಿ ರಾಯಭಾರಿಯೊಂದಿಗೆ ಚರ್ಚೆ 
ರಾಜ್ಯ

ಸ್ಟಾರ್ಟ್‌ಅಪ್‌ಗಳು, ನಾವೀನ್ಯತೆ, ಸಂಶೋಧನೆಗಾಗಿ ಇಟಲಿ ರಾಯಭಾರಿಯೊಂದಿಗೆ ಚರ್ಚೆ

ಪ್ರಮುಖ ಮುಖ್ಯಾಂಶಗಳು

  • ಇಟಲಿಯೊಂದಿಗೆ ಇನ್ನಷ್ಟು ಬಲಿಷ್ಠ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಹಾಗೂ ಸಂಸ್ಥೆಗಳು ಸಹಯೋಗಿಸಲು ಪ್ರಾಯೋಗಿಕ ಮಾರ್ಗಗಳನ್ನು ರೂಪಿಸಲು ಇರುವ ಅವಕಾಶ
  • ಎರಡೂ ಪರಿಸರ ವ್ಯವಸ್ಥೆಗಳಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸಬಲ್ಲ ಕೇಂದ್ರೀಕೃತ ಸಹಭಾಗಿತ್ವಗಳು ಮತ್ತು ಉಪಕ್ರಮಗಳ ಮೂಲಕ ಈ ಚರ್ಚೆಗಳನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಗಮನ
ಬೆಂಗಳೂರು: ರಾಜ್ಯದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಭಾರತದಲ್ಲಿನ ಇಟಲಿ ರಾಯಭಾರಿ ಆಂಟೋನಿಯೊ ಬಾರ್ಟೋಲಿ ಅವರೊಂದಿಗೆ ಕರ್ನಾಟಕ ಮತ್ತು ಇಟಲಿ ನಡುವಿನ ಸ್ಟಾರ್ಟ್‌ಅಪ್‌ಗಳು, ನಾವೀನ್ಯತೆ, ಸಂಶೋಧನೆ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.
ರಾಜ್ಯ ಸರ್ಕಾರದ ಪರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಡಾ. ಎನ್. ಮಂಜುಳಾ, ಕರ್ನಾಟಕವು ಬಲಿಷ್ಠ ಮತ್ತು ಚೈತನ್ಯಭರಿತ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಸ್ಟಾರ್ಟ್‌ಅಪ್‌ಗಳು, ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳು ವಿವಿಧ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಟಲಿಯೊಂದಿಗೆ ಇನ್ನಷ್ಟು ಬಲಿಷ್ಠ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಹಾಗೂ ಸಂಸ್ಥೆಗಳು ಸಹಯೋಗಿಸಲು ಪ್ರಾಯೋಗಿಕ ಮಾರ್ಗಗಳನ್ನು ರೂಪಿಸಲು ಇರುವ ಅವಕಾಶಗಳನ್ನು ನಾವು ಸ್ವಾಗತಿಸುತ್ತೇವೆ. ಎರಡೂ ಪರಿಸರ ವ್ಯವಸ್ಥೆಗಳಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸಬಲ್ಲ ಕೇಂದ್ರೀಕೃತ ಸಹಭಾಗಿತ್ವಗಳು ಮತ್ತು ಉಪಕ್ರಮಗಳ ಮೂಲಕ ಈ ಚರ್ಚೆಗಳನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಗಮನವಾಗಿದೆ ಎಂದು ಹೇಳಿದರು.
ವ್ಯಾಪಕ ಚರ್ಚೆಗಳಿಂದ ಕೇಂದ್ರೀಕೃತ ಮತ್ತು ಪ್ರಾಯೋಗಿಕ ಸಹಭಾಗಿತ್ವಗಳತ್ತ ಸಾಗುವ ಮಹತ್ವವನ್ನು ಎರಡೂ ಕಡೆಯವರು ಪ್ರತಿಪಾದಿಸಿದರು. ಸೀಮಿತ ಸಂಖ್ಯೆಯ ನವೋದ್ಯಮಗಳು, ಸಂಸ್ಥೆಗಳು ಮತ್ತು ಕ್ಷೇತ್ರಗಳೊಂದಿಗೆ ಆರಂಭಿಸಿ, ಫಲಿತಾಂಶಗಳ ಆಧಾರದ ಮೇಲೆ ಈ ಉಪಕ್ರಮಗಳನ್ನು ಹಂತ ಹಂತವಾಗಿ ವಿಸ್ತರಿಸುವುದಕ್ಕೆ ಒತ್ತು ನೀಡಲಾಯಿತು.
ಬೆಂಗಳೂರಿನ ಇಟಲಿ ಕಾನ್ಸುಲೇಟ್ ಜನರಲ್‌ನ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ; ಬೆಂಗಳೂರಿನ ಇಟಲಿ ಕಾನ್ಸುಲೇಟ್ ಜನರಲ್‌ನ ವೈಜ್ಞಾನಿಕ ಅಟಾಶೆ ಪ್ರೊ. ಮಾರ್ಕೊ ರೇ ಹಾಗೂ ಕರ್ನಾಟಕ ಇನ್ನೋವೇಶನ್ ಆೃಂಡ್ ಟೆಕ್ನಾಲಜಿ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ಉಪಸ್ಥಿತರಿದ್ದರು.