ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ರೈತರು ಖಜೂರಿಯಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು. ಪ್ರಫುಲ್​ ಆಳಂಗ, ಗುರುನಾಥ ಬಿರಾದಾರ, ಮಹೇಶ ಪಾಟೀಲ್​, ರಾಮನಗೌಡ ಬಿರಾದಾರ ಇತರರಿದ್ದರು. 
ರಾಜ್ಯ

ಬೀಜ, ಗೊಬ್ಬರ ವಿತರಣೆಯಲ್ಲಿ ತಾರತಮ್ಯ

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಖಜೂರಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಆಕ್ರೋಶ
ಆಳಂದ: ರೈತರಿಗೆ ಸರ್ಕಾರದಿಂದ ನೀಡಿರುವ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡದೆ ಅನ್ಯಾಯ ಮಾಡಲಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ರೈತಾಪಿ ವರ್ಗ ಆಗ್ರಹಿಸಿತು.
ಬೀಜ, ಗೊಬ್ಬರ ವಿತರಣೆಯಲ್ಲಿನ ತಾರತಮ್ಯ ಖಂಡಿಸಿ ಖಜೂರಿ ರೈತರ ಸಂಪರ್ಕ ಕೇಂದ್ರಕ್ಕೆ ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದ ರೈತರು, ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿಸುತ್ತಿರುವ ಅಧಿಕಾರಿಗಳು ತಮಗಿಷ್ಟದಂತೆ ಕೆಲಸ ಮಾಡುತ್ತಿದ್ದಾರೆ. ತಮಗೆ ಬೇಕಾದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೀಜ ಕೊಡುತ್ತಿದ್ದಾರೆ. ಕಳೆದ ವರ್ಷ ಎಲ್ಲ ಗ್ರಾಮಗಳ ರೈತರು ಖಜೂರಿಗೆ ಬಂದು ಬೀಜ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಬೇರೆಯವರಿಗೆ ಬೀಜ ದೊರೆಯಿತ್ತಿಲ್ಲ. ಅಧಿಕಾರಿಗಳು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೃಷಿ ಸಹಾಯಕ ನಿರ್ದೇಶಕ ತಿಪ್ಪಯ್ಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿ ಮಾತನಾಡಿ, ಬೀಜ ವಿತರಣೆಯಲ್ಲಿ ರೈತರಿಗೆ ಯಾವುದೇ ತಾರತಮ್ಯ ಆಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಹೋರಾಟ ವಾಪಸ್​ ಪಡೆಯಲಾಯಿತು.
ಪ್ರಮುಖರಾದ ಪ್ರಫುಲ್​ ಆಳಂಗ, ಗುರುನಾಥ ಬಿರಾದಾರ, ರಾಮನಗೌಡ ಬಿರಾದಾರ, ಸಂಜುಕುಮಾರ ಜವಳಗ, ಸಂತೋಷ ಜಂಬಗಾ, ಪ್ರಶಾಂತ ಪಾಟೀಲ್​, ಪ್ರಶಾಂತ ತಡೋಳ ಇತರರಿದ್ದರು.