ಎಂ.ರಾಮಪ್ಪ 
ರಾಜ್ಯ

ಫಲಾನುಭವಿಗಳ ಪಟ್ಟಿ ಕಳುಹಿಸದಿದ್ದರೆ ಶಿಸ್ತು ಕ್ರಮ-beneficiary list

ಬೆಂಗಳೂರು: ಗಂಗಾ ಕಲ್ಯಾಣ ಮತ್ತುಭೂ ಒಡೆತನ ಸೇರಿ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಜು.15ರೊಳಗೆ ಕಳುಹಿಸಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ಅಧ್ಯಕ್ಷನ್ನಾಗಿ ಅಧಿಕಾರ ವಹಿಸಿಕೊಂಡು 50 ದಿನವಾಗಿದೆ.ಈ ಅವಧಿಯಲ್ಲಿ ಎಲ್ಲ ಶಾಸಕರಿಗೂ ಪತ್ರ ಬರೆದು ಫಲಾನುಭವಿಗಳ ಆಯ್ಕೆಗೆ ಮನವಿ ಮಾಡಿದ್ದೇನೆ. ರಾಜ್ಯವ್ಯಾಪಿ ಪ್ರವಾಸ ಮಾಡಿ ಜನರ ಸಮಸ್ಯೆ ಅರಿಯುವ ಕಾರ್ಯ ಮಾಡಿದ್ದೇನೆ. ಸಮಾಜದ ಕಡು ಬಡವರಿಗೆ ಸರ್ಕಾರದ ಸವಲತ್ತು ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ನಿಮಗದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದು ಈಗಾಗಲೇ ನನ್ನ ಅನುಭವಕ್ಕೂ ಬಂದಿದೆ.ಮದ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಂಡಿದ್ದೇನೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೂ ಎಚ್ಚರಿಕೆ ನೀಡಲಾಗಿದೆ. ನಿಮಗದ ಆಡಳಿತದಲ್ಲಿ ಪಾರದರ್ಶಕತೆ ತರಲಾಗತ್ತಿದೆ. ಹಿಂದಿನ ವ್ಯವಸ್ಥೆಯಲ್ಲಿ ಫಲಾನುಭವಿಗಳ ಹೆಸರಿನಲ್ಲಿ ಅವ್ಯವಹಾರ ಆಗಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರವನ್ನು ಖಜಾನೆ ಮೂಲಕ ಫಲಾನುಭವಿಗಳಿಗೆ ಹಣ ಹಾಕುವ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದೇನೆ. ನಿಗಮದ ಪರಾಮರ್ಶೆ ಸಭೆಯಲ್ಲಿ ಗೈರುಹಾಜರಾಗಿರುವ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಂ.ರಾಮಪ್ಪ ಹೇಳಿದರು.
ಜ.10,11ರಂದು ಕಾರ್ಯಾಗಾರ:
2024-25ರಲ್ಲಿ 106 ಕೋಟಿ ರೂ, 2025-26ರಲ್ಲಿ 93 ಕೋಟಿ ರೂ.ಅನುದಾನವನ್ನು ಸರ್ಕಾರ ನಿಗಮಕ್ಕೆ ಕೊಟ್ಟಿದೆ. ಮುಂದಿನ ಸಾಲಿನಲ್ಲಿ 300 ಕೋಟಿ ರೂ.ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ 90 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 10 ಸಾವಿರ ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.ಯೋಜನೆಗಳು ಕುರಿತು ಅರಿವು ಮೂಡಿಸಲು ಬೆಂಗಳೂರಿನಲ್ಲಿ ಜ.10 ಮತ್ತು ಜ.11ರಂದು ಕಾರ್ಯಾಗಾರ ಆಯೋಜಿಸಲಾಗಿದೆ. ವಿಭಾಗಮಟ್ಟದಲ್ಲೂ ಇದನ್ನು ನಡೆಸಲಾಗುವುದು.ಜಿಲ್ಲಾ ಹಂತದಲ್ಲಿ ನಿಗಮದ ಶಾಶ್ವತ ಕಚೇರಿ ನಿರ್ಮಿಸಲು ಜಾಗ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಮಪ್ಪ ಮಾಹಿತಿ ನೀಡಿದರು.