Disappearance of folk treasures
ತುರುವೇಕೆರೆ: ನಾಗರಿಕತೆ ಹೆಚ್ಚಾಗಿದರಿಂದ ನಮ್ಮ ಜಾನಪದ ಸಂಪತ್ತು ಕಣ್ಮರೆಯಾಗುತ್ತಿದೆ ಎಂದು ಮಹಾಮಹಿಮ ಶ್ರೀ ಮುನೇಶ್ವರಸ್ವಾಮಿ ದಾಸೋಹ ಮಠದ ಸಂಸ್ಥಾಪಕ ಸಿ.ಎ.ಶಿವಪ್ಪ ವಿಷಾದಿಸಿದರು.
ತಾಲೂಕಿನ ದಂಡಿನಶಿವರದ ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್, ಚಿಮ್ಮನಹಳ್ಳಿಯ ಶ್ರೀ ಮುನೀಶ್ವರ ಸ್ವಾಮಿ ದಾಸೋಹ ಮಠ, ಸುಕ್ಷೇತ್ರ ಮುನೀಶ್ವರ ನಗರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಮಹಿಳಾ ಮತ್ತು ಮಕ್ಕಳ ಜಾನಪದ ಜಾತ್ರೆಯಲ್ಲಿ ವಾತನಾಡಿ, ಆಧುನಿಕ ಕಾಲಟ್ಟದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದ ಮಣ್ಣಿನ ಸೊಗಡಿನ ಜಾನಪದ ಸಂಪತ್ತನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ಅವುಗಳ ಮಹತ್ವದ ಕುರಿತು ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಾನಪದ ಜಾತ್ರೆಯಲ್ಲಿ ಸೋಬಾನ ಪದ, ರಾಗಿ ಬೀಸೋ ಪದ, ದಾಸರ ಪದ, ಭಜನದ, ತತ್ವಪದ, ಜಾನಪದ, ಹುಲಿವೇಷ, ಕಂಸಾಲೆ, ತಮಟೆ ವಾದ್ಯ, ಡೊಳ್ಳುಕುಣಿತ, ಸೋಮನ ಕುಣಿತ, ಹೆಣ್ಣು ಮಕ್ಕಳಿಂದ ಕೋಲಾಟ ನತ್ಯಗಳು ನಡೆದವು. ಸೋಬಾನೆ ಪದ, ರಾಗಿಬೀಸೋ ಪದದ ಹಾಡುಗಳನ್ನು ಬಹಳ ಸುಮಧುರವಾಗಿ ಹಾಡಿದ ಸಣ್ಣಮ್ಮ ಅವರನ್ನು ಗೌರವಿಸಲಾಯಿತು.
ಕಿರುತೆರೆ ನಿರ್ದೇಶಕ ಶ್ರೀನಾಥ್ ಕೌಂಡಿನ್ಯ, ಶಾಲೆಯ ಪ್ರಾಂಶುಪಾಲ ಎಂ.ಸಿ.ನಾಗೇಶ್, ಅಗ್ನಿಶಾಮಕ ದಳದ ನಿವೃತ್ತ ಅಧಿಕಾರಿ ಜ್ಞಾನಮೂರ್ತಿ, ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನಯ್ಯ, ಸಾವಾಜಿಕ ಕಾರ್ಯಕರ್ತ ಶಿವಲಿಂಗಯ್ಯ, ಕಲ್ಕೆರೆ ಕೇಶವಯ್ಯ, ಟಿ.ವೆಂಕಟೇಶ್, ಟ್ರಸ್ಟ್‌ನ ನಿರ್ದೇಶಕರಾದ ಜಿ.ಅಶೋಕ್, ರಾಜು,mಡಿ.ಎನ್.ಸತ್ಯನಾರಾಯಣಸ್ವಾಮಿ, ಜಿ.ಸುರೇಶ್, ಕೆ.ಚಿದಾನಂದ್, ಖಜಾಂಚಿ ಕಿಶೋರ್ ದಲ ಇದ್ದರು.