ಸಾಂದರ್ಭಿಕ ಚಿತ್ರ Digital arrest 
ರಾಜ್ಯ

Digital Arrest | 32 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ..ವಂಚನೆ ಕಥೆ ಕೇಳಿದ್ರೆ ಶಾಕ್ ಆಗ್ತಿರ!

ಪ್ರಮುಖ ಮುಖ್ಯಾಂಶಗಳು

  • ಸಿಬಿಐ, ಆರ್‌ಬಿಐ ಹಿರಿಯ ಅಧಿಕಾರಿಗಳೆಂದು ಸುಳ್ಳು ಹೇಳಿ ಮಹಿಳೆಗೆ ವಂಚನೆ
  • ಈ ವಿಚಾರವನ್ನು ಯಾರೊಂದಿಗಾದರೂ ಹಂಚಿಕೊಂಡಲ್ಲಿ ನಿಮ್ಮನ್ನು ಬಂಧಿಸುತ್ತೇವೆ
  • ಆಕೆಯ ಕ್ಯಾಮೆರಾ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದ ವಂಚಕರು
ಬೆಂಗಳೂರು: ಸಿಬಿಐ, ಆರ್‌ಬಿಐ ಹಿರಿಯ ಅಧಿಕಾರಿಗಳೆಂದು ಸುಳ್ಳು ಹೇಳಿ ಮಹಿಳೆಯೊಬ್ಬಳಿಂದ ಬರೋಬ್ಬರಿ 32 ಕೋಟಿ ರೂ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಏನು?
ಮಹಿಳೆಯೊಬ್ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮುಂಬೈನ ಅಂಧೇರಿಯಿಂದ ಆಕೆಯ ಹೆಸರಿನಲ್ಲಿ ಬುಕ್ ಮಾಡಲಾದ ಪ್ಯಾಕೇಜ್‌ನಲ್ಲಿ ನಾಲ್ಕು ಪಾಸ್‌ಪೋರ್ಟ್‌ಗಳು, ಮೂರು ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಂಡಿಎಂಎ ಸೇರಿದಂತೆ ನಿಷೇಧಿತ ವಸ್ತುಗಳು ಇವೆ ಎಂದು ಹೆದರಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಆಕೆ ನಾನು ಮುಂಬೈಗೆ ಪ್ರಯಾಣಿಸಿಲ್ಲ ಎಂದು ತಿಳಿಸಿದ್ದರೂ, ಆಕೆಗೆ ಆರೋಪಿಗಳು ತಮ್ಮ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಈ ವಿಷಯವನ್ನು ಸೈಬರ್ ಅಪರಾಧ ಪ್ರಕರಣವಾಗಿ ಉಲ್ಬಣಗೊಳಿಸಲಾಗುತ್ತಿದೆ ಎಂದು ಭಯಪಡಿಸಿದ್ದಾರೆ.
ಈ ಸಮಯದಲ್ಲಿ ಆಕೆಯ ಕರೆಯನ್ನು ಸಿಬಿಐ ಅಧಿಕಾರಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗೆ ವರ್ಗಾಹಿಸಿದ್ದಾರೆ. ಈ ವಿಚಾರವನ್ನು ಯಾರೊಂದಿಗಾದರೂ ಹಂಚಿಕೊಂಡಲ್ಲಿ ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತನ್ನ ಕುಟುಂಬದ ಸುರಕ್ಷತೆಯ ಬಗ್ಗೆ ಭಯಪಟ್ಟ, ಮಹಿಳೆಯು ವಂಚಕರ ಮಾತನ್ನು ಕೇಳಲು ಆರಂಭಿಸಿದ್ದಾಳೆ.
ವಂಚಕರು ಆಕೆಗೆ ಎರಡು ಸ್ಕೈಪ್ ಐಡಿಗಳನ್ನು ರಚಿಸಲು ಸೂಚಿಸಿದ್ದಾರೆ. ಅದರ ಮೂಲಕ ಮೋಹಿತ್ ಹಂಡಾ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯೊಬ್ಬರು ಆಕೆಯ ಕ್ಯಾಮೆರಾ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಮಹಿಳೆಯು ಗೃಹ ಬಂಧನದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ದೂರಿನಲ್ಲೇನಿದೆ?

ವಂಚಕರು 2 ದಿನಗಳ ಕಾಲ ಸಿಬಿಐ ಅಧಿಕಾರಿಗಳು ಎಂದು ಸಂಪರ್ಕವನ್ನು ನಡೆಸಲು ಪ್ರಾರಂಭಿಸಿದ್ದರು. ಪ್ರತಿದಿನ ಆಕೆಯನ್ನು ವಿಡಿಯೋದಲ್ಲಿ ವೀಕ್ಷಿಸುತ್ತಿದ್ದರು, ಮೌಖಿಕವಾಗಿ ನಿಂದಿಸಿ, ಬಂಧನದ ಬೆದರಿಕೆಯನ್ನು ಹಾಕಿ, ತನ್ನ ಮುಗ್ಧತೆಯನ್ನು ಸಾಬೀತುಪಡಿಸುವಂತೆ ಒತ್ತಾಯಿಸಿದರು ಎಂದು ಮಹಿಳೆಯು ದೂರು ನೀಡಿದ್ದಾಳೆ.
ವಂಚಕರಿಗೆ ನನ್ನ ಫೋನ್ ಚಟುವಟಿಕೆ ಮತ್ತು ಸ್ಥಳದ ಬಗ್ಗೆ ಮೊದಲೇ ಮಾಹಿತಿ ತಿಳಿದಿರಬೇಕು. ಇದು ನನ್ನನ್ನು ಇನ್ನಷ್ಟು ಭಯಕ್ಕೆ ನೂಕಿತು. ಈ ಅಪರಾಧದಿಂದ ನನ್ನ ಹೆಸರನ್ನು ಕೈಬಿಡಬೇಕೆಂದರೆ, ಅದಕ್ಕೆ ತನ್ನ ಎಲ್ಲಾ ಆಸ್ತಿಗಳ ವಿವರಗಳನ್ನು ಆರ್‌ಬಿಐ ಅಡಿಯಲ್ಲಿ ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಪರಿಶೀಲನೆಗಾಗಿ ಸಲ್ಲಿಸಿ ಎಂದು ತಿಳಿಸಿದ್ದರು. ನಂತರ ನಿತಿನ್ ಪಟೇಲ್ ಹೆಸರಿನಲ್ಲಿ ಸಹಿ ಮಾಡಲಾದ ಸೈಬರ್ ಅಪರಾಧ ಇಲಾಖೆಯಿಂದ ನಕಲಿ ಪತ್ರಗಳನ್ನು ಸಹ ಸಲ್ಲಿಸಿದ್ದರು ಎಂದರು.
ತದನಂತರ ಮಹಿಳೆಯು ಸೆಪ್ಟೆಂಬರ್ 24 ಮತ್ತು ಅಕ್ಟೋಬರ್ 22, ರ ನಡುವೆ, ತಮ್ಮ ಎಲ್ಲಾ ಬ್ಯಾಂಕ್ ವಿವರಗಳನ್ನು ವಂಚಕರಿಗೆ ಹಸ್ತಾಂತರಿಸಿದ್ದಾರೆ. ವಂಚಕರು ಅವರ ಆಸ್ತಿಯ ಶೇ.90ರಷ್ಟು ಕ್ಲಿಯರೆನ್ಸ್‌ಗಾಗಿ ಠೇವಣಿ ಇಡಬೇಕೆಂದು ಒತ್ತಾಯಿಸಿದ್ದಾರೆ. ಇದಾದ ಬಳಿಕ ಹೆಚ್ಚುವರಿಯಾಗಿ 2 ಕೋಟಿ ರೂ.ಗಳನ್ನು ಭದ್ರತೆಯಾಗಿ ಠೇವಣಿ ಇಡಲು ಸೂಚಿಸಿದ್ದಾರೆ ಎಂದು ಮಹಿಳೆಯು ಆರೋಪಿಸಿದ್ದಾರೆ.
ವಂಚಕರು ಮಹಿಳೆಗೆ ಸುಮಾರು ದಿನಗಳವರೆಗೂ ಇದೇ ರೀತಿಯಾಗಿ ಹಿಂಸೆಯನ್ನು ನೀಡುತ್ತಿದ್ದರು. ಠೇವಣಿ ಮಾಡಿದ ಹಣವನ್ನು ಫೆಬ್ರವರಿ ವೇಳೆಗೆ ಹಿಂತಿರುಗಿಸಲಾಗುವುದು ಎಂದು ಭರವಸೆಯನ್ನು ನೀಡುತ್ತಿದ್ದರು. ಹಲವು ದಿನಗಳ ನಂತರ ಆಕೆಯ ಸಂವಹನಗಳು ಇದ್ದಕ್ಕಿಂದ್ದಂತೆಯೇ ನಿಂತು ಹೋಗಿದ್ದಾವೆ ಎಂದು ವರದಿ ಮಾಡಿದ್ದಾರೆ.
ಒಟ್ಟಾರೆಯಾಗಿ, ಸಂತ್ರಸ್ತೆ ಮಹಿಳೆಯು 31.83 ಕೋಟಿ ರೂ.ಗಳ 187 ವಹಿವಾಟುಗಳನ್ನು ನಡೆಸಿದ್ದಾರೆ. ಪ್ರಾಥಮಿಕವಾಗಿ ಕರೆಗಳು ಮತ್ತು ಆಕೆಯ ಮೊಬೈಲ್​ ಸಂಖ್ಯೆಯ ನಿರಂತರ ಮೇಲ್ವಿಚಾರಣೆ ಮೂಲಕ ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಪ್ರಕರಣದ ಕುರಿತು ಪೊಲೀಸರು ಮಾಹಿತಿಯನ್ನು ಕಲೆ ಹಾಕಲು ಆರಂಭಿಸಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ (ಏಜೆನ್ಸೀಸ್​).