ಕೊಟ್ಟೂರು ಪಟ್ಟಣದ ಎಲ್.ಬಿ.ಬಡಾವಣೆಯಲ್ಲಿನ ಅಕ್ಷಯ ಅವರ ಬಾಡಿಗೆ ಮನೆಗೆ ಎಸ್ಪಿ ಎಸ್.ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ವಿಜಯನಗರ ಪೊಲೀಸರಿಂದ ತನಖೆ
- ಮನೆಯಲ್ಲಿ ಅಗೆದಿರುವ ಗುಂಡಿ, ರಕ್ತದ ಕಲೆ ಪತ್ತೆ
ಕೊಟ್ಟೂರು (ವಿಜಯನಗರ): ತಂದೆ ತಾಯಿ ಸೇರಿ ಸಹೋದರಿಯ ಕೊಲೆ ನಡೆದಿದೆ ಎಂದು ಶಂಕಿಸಿ ಪಟ್ಟಣದ ಎಲ್.ಬಿ.ಬಡಾವಣೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕೊಟ್ಟೂರಿನ ಅಕ್ಷಯ (24) ಎಂಬ ವ್ಯಕ್ತಿಯಿಂದ ತನ್ನ ತಂದೆ ಭೀಮರಾಜ್ (46), ತಾಯಿ ಜಯಮ್ಮ (42), ಸಹೋದರಿ ಅಮೃತ (17) ಅವರ ಕೊಲೆ ಆಗಿವೆ ಎಂಬ ಶಂಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಪೊಲೀಸ್ ಠಾಣೆ ಸಿಪಿಐ ಡಿ.ದುರುಗಪ್ಪ ಹಾಗೂ ಪಿಎಸ್‌ಐ ಗೀತಾಂಜಲಿ ಸಿಂಧೆ ಪರಿಶೀಲಿಸಿದರು.
ಹೊಸದುರ್ಗಾ ತಾಲೂಕಿನ ದೊಡ್ಡಕಿಟ್ಟದಹಳ್ಳಿ ನಿವಾಸಿ ಅಕ್ಷಯ ಕಳೆದ ಎರಡು ವರ್ಷಗಳಿಂದ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆ ಬದಿ ಟೈರ್ ರಿವೈಡ್ ಕೆಲಸ ಮಾಡುತ್ತಿದ್ದ. ಅಕ್ಷಯ ತಂದೆ, ತಾಯಿ, ಸಹೋದರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆಗೆ ಕರೆದುಕೊಂಡ ಬಂದ ವೇಳೆ ಕಾಣೆ ಆಗಿದ್ದಾರೆ ಎಂದು ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದರು. ದೂರಿನ ಅನ್ವಯ ಪೋಲೀಸರು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಕಂಡು ಬಂದಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ವಿಜಯನಗರ ಪೋಲೀಸರಿಗೆ ಮಾಹಿತಿ ಸಂಗ್ರಹಿಸುವAತೆ ಸೂಚಿದರು. ಇದರಿಂದ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಕೊಟ್ಟೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ಪರಿಶೀನೆ ನಡೆಸಿದರು. ಈ ವೇಳೆ ಮನೆಯಲ್ಲಿ ಗುಂಡಿ ಹಗೆದಿರುವ ಮತ್ತು ರಕ್ತದ ಕಲೆ ಕಂಡು ಬಂದಿದ್ದು ತನಿಖೆ ಶುರುವಾಗಿದೆ.