ಡೈಮಂಡ್ ಎಂಟರ್‌ಪ್ರೈಸಸ್ ಹೊರ ತಂದಿರುವ ಡೈಮಂಡ್ ಫ್ರೆಶ್ ಚಿಕನ್ ಮೊಬೈಲ್ ಆ್ಯಪನ್ನು ಮಂಜೇಶ್ ಜಾದವ್ ಬಿಡುಗಡೆ ಮಾಡಿದರು. ಕೆ.ಎನ್.ನಾಗರಾಜು, ಡಾ.ಇಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಡೈಮಂಡ್ ಫ್ರೆಶ್ ಚಿಕನ್ ಮೊಬೈಲ್ ಆ್ಯಪ್ ಬಿಡುಗಡೆ; ಆನ್​ಲೈನ್ ಮೂಲಕ ಫ್ರೆಶ್ ಚಿಕನ್ ಡೆಲಿವರಿ

ಪ್ರಮುಖ ಮುಖ್ಯಾಂಶಗಳು

  • ಡೈಮಂಡ್ ಫ್ರೆಶ್ ಚಿಕನ್ ಆ್ಯಪ್ ಬಿಡುಗಡೆ
  • ಇದೇ ಮೊದಲ ಬಾರಿಗೆ ಆನ್​ಲೈನ್​ಲ್ಲಿ ಫ್ರೆಶ್ ಚಿಕನ್
  • ಡೈಮಂಡ್ ಎಂಟರ್‌ಪ್ರೈಸಸ್ ಎಂಡಿ ಕೆ.ಎನ್.ನಾಗರಾಜ ಪ್ರಯತ್ನ

ಬೆಂಗಳೂರು:ಇದೇ ಮೊದಲ ಬಾರಿಗೆಆನ್‌ಲೈನ್ ಮೂಲಕ ಮನೆಬಾಗಿಲಿಗೆಫ್ರೆಶ್ ಚಿಕನ್ ನೀಡುವ ಡೈಮಂಡ್ಫ್ರೆಶ್ ಚಿಕನ್ ಆ್ಯಪ್ ಬಿಡುಗಡೆಯಾಗಿದೆ. ಡೈಮಂಡ್ಎಂಟರ್‌ಪ್ರೈಸಸ್ ಎಂಡಿ ಕೆ.ಎನ್.ನಾಗರಾಜಅವರ ನಾಲ್ಕು ವರ್ಷಗಳ ಕನಸುಸಾಕಾರಗೊಂಡಿದ್ದು,ಆನ್‌ಲೈನ್‌ನಲ್ಲಿಬುಕ್ ಮಾಡಿದ ಒಂದು ಗಂಟೆಯಲ್ಲಿಮನೆಬಾಗಿಲಿಗೆ ಫ್ರೆಶ್ ಚಿಕನ್ಡೆಲಿವರಿ ನೀಡಲಾಗುತ್ತದೆ.

ಪಶುವೈದ್ಯಕೀಯಕಾಲೇಜು ಸಭಾಂಗಣದಲ್ಲಿ ನಡೆದಕಾರ್ಯಕ್ರಮದಲ್ಲಿ ಕೋಳಿ ಮಾಂಸಮಾರಾಟಗಾರರ ಸಂಘದ ಅಧ್ಯಕ್ಷ ಮಂಜೇಶ್ಜಾದವ್ ನೂತನ ಆ್ಯಪ್‌ಗೆ ಚಾಲನೆನೀಡಿದರು. ಈವೇಳೆ ಮಾತನಾಡಿದ ಜಾದವ್,40 ವರ್ಷದ ಹಿಂದೆಒಬ್ಬ ಮನುಷ್ಯ ವರ್ಷಕ್ಕೆ 100ಗ್ರಾಂ ಚಿಕನ್ಸೇವಿಸುತ್ತಿದ್ದ.ಈಗ ವರ್ಷಕ್ಕೆ8 ಕೆ.ಜಿ.ವರೆಗೆಚಿಕನ್ ತಿನ್ನುತ್ತಿದ್ದಾನೆ.ವಿದೇಶಗಳಲ್ಲಿವರ್ಷಕ್ಕೆ ಒಬ್ಬ ವ್ಯಕ್ತಿ 40ಕೆ.ಜಿ.ಚಿಕನ್ ತಿನ್ನುತ್ತಾನೆ.ಭಾರತದಲ್ಲೂಚಿಕನ್ ಸೇವನೆ ಹೆಚ್ಚಾಗಬೇಕು.ಈ ನಿಟ್ಟಿನಲ್ಲಿಡೈಮಂಡ್ ಆ್ಯಪ್ ಉತ್ತಮ ಪ್ರಯತ್ನಎಂದರು.

ಕರ್ನಾಟಕವೆಟರ್ನರಿ ಕೌನ್ಸಿಲ್ ಚೇರ್ಮನ್ಡಾ.ಇಂದ್ರೇಶ್ಮಾತನಾಡಿ,ವೈಜ್ಞಾನಿಕವಾಗಿಫ್ರೆಶ್ ಚಿಕನ್ ಉತ್ತಮವಾದದ್ದು.ಅದನ್ನು ಆನ್‌ಲೈನ್ಮೂಲಕ ಕೇವಲ 1ಗಂಟೆಯಲ್ಲಿಡೆಲಿವರಿ ನೀಡುವ ಆ್ಯಪ್ ನಿಜಕ್ಕೂಉಪಯುಕ್ತವಾಗಿದೆ.ತಾಯಿ ಹಾಲುಹೊರತುಪಡಿಸಿ ಜಗತ್ತಿನಲ್ಲಿಅತ್ಯಂತ ಪ್ರೋಟೀನ್‌ಯುಕ್ತ ಆಹಾರಚಿಕನ್ ಮತ್ತು ಮೊಟ್ಟೆ.ಆದ್ದರಿಂದಅಪಪ್ರಚಾರಕ್ಕೆ ಕಿವಿಗೊಡದೆಎಲ್ಲರೂ ಚಿಕನ್ ಹೆಚ್ಚಾಗಿ ಸೇವಿಸಬೇಕುಎಂದರು.

ಕಾರ್ಯಕ್ರಮದಲ್ಲಿಪೌಲ್ಟ್ರಿ ವ್ಯಾಪಾರಿಗಳ ಸಂಘದಡಾ.ಗೋಪಾಲರೆಡ್ಡಿ,ಆಂಜನಪ್ಪ,ಸ್ಥಳೀಯ ಬಿಜೆಪಿಮುಖಂಡೆ ಸುನಂದಮ್ಮ,ಆ್ಯಪ್ ವಿನ್ಯಾಸಕವಿರೇಂದ್ರ ಕುಮಾರ್ ಮತ್ತಿತರರುಪಾಲ್ಗೊಂಡಿದ್ದರು.

ಕೋಳಿ ಉದ್ಯಮದಲ್ಲಿ 30 ವರ್ಷದ ಅನುಭವವಿದ್ದು, ಕೆಳಹಂತದಿಂದ ಉದ್ಯಮವನ್ನು ಕಟ್ಟಿದ್ದೇನೆ. ಗ್ರಾಹಕರ ಬೇಡಿಕೆಯಂತೆ ಜೀವಂತ ಮತ್ತು ಆರೋಗ್ಯಯುತ ಕೋಳಿಯ ಫ್ರೆಶ್ ಮಾಂಸವನ್ನು ಕೇವಲ ಒಂದು ಗಂಟೆಯಲ್ಲಿ ಮನೆಗೆ ಡೆಲಿವರಿ ನೀಡಲಾಗುತ್ತದೆ. ಬೆಂಗಳೂರಿನ ಆಯ್ದ ಏರಿಯಾಗಳಲ್ಲಿ ಮೊದಲ ಹಂತದಲ್ಲಿ ಸರ್ವೀಸ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರು ಮತ್ತು ರಾಜ್ಯಾದ್ಯಂತ ವಿಸ್ತರಿಸಲಾಗುವುದು.