Dialysis center to open soon
ಚಿಂತಾಮಣಿ: ನಗರದ ಬೂರಗಮಾಕಲಹಳ್ಳಿ ಲಯನ್ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಪಡೆದು ಕೇಂದ್ರ ಆರಂಭಿಸಿ ಜನರಿಗೆ ಅನುಕೂಲ ಕಲ್ಪಿಸಿ, ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾ ಪ್ರಾಂತಪಾಲ ಎ.ಆಕಾಶ್ ತಿಳಿಸಿದರು.
ನಗರದ ರಾಧಕೃಷ್ಣ ಪಾರ್ಟಿ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಚಿಂತಾಮಣಿ, ಶಿಡ್ಲಟ್ಟ ಹಾಗೂ ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಶಿಡ್ಲಟ್ಟ ಕ್ಲಬ್ನಿಂದ ಮಹಿಳೆಯರಿಗೆ ಹಲವು ತರಬೇತಿ ನೀಡಲಾಗಿದ್ದು ಸುಮಾರು 40 ಮಹಿಳೆಯರಿಗೆ ದೃಢೀಕರಣ ಪತ್ರ ನೀಡಿ ಪ್ರಶಂಸಿದರು ಎಂದರು.
ಚಿಕ್ಕಬಳ್ಳಾಪುರ ಲಯನ್ಸ್ಕ್ಲಬ್ನ ಅಧ್ಯಕ್ಷ ಡಾ.ಚಂದ್ರಪ್ಪ ಮಾತನಾಡಿದರು. ಜೋನ್ಛೇರ್ ಪರ್ಸನ್ ಅಜಿತ್ಬಾಬು, ಜಿಲ್ಲಾ ಕೋರ್ಡಿನೇಟರ್ ದೇವರಾಜ್, ವಿಜಯ್ಕುಮಾರ್, ಮಧಸೂದನ್, ಸಾಯಿ ಆಸ್ಪತ್ರೆ ಸುನಿಲ್, ಚಿಂತಾಮಣಿ ಲಯನ್ಸ್ಕ್ಲಬ್ ಅಧ್ಯಕ್ಷ ಕಾಗತಿ ವೆಂಕಟರತ್ನಂ, ಕಾರ್ಯದರ್ಶಿ ಅಮರೇಶ್, ಖಜಾಂಚಿ ಸುರೇಂದ್ರ ನಾಥ್, ರಾಮಚಂದ್ರ ಇದ್ದರು.