ದೋರನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿರುವ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಸಂಸ್ಥೆ ಯೋಜನಾಽಕಾರಿ ಕುಮಾರ ಬಣಕಾರ ಚಾಲನೆ ನೀಡಿದರು. ಬೀಸಯ್ಯ, ಶೋಭಾ, ಬಸವರಾಜ ಸಿನ್ನೂರ, ದೇವಿಂದ್ರಪ್ಪ ವಿಶ್ವಕರ್ಮ ಇತರರಿದ್ದರು.
ದೋರನಹಳ್ಳಿ : ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಉತ್ತಮ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೆರವಿನಿಂದ ಅನೇಕ ಹೆಣ್ಮಕ್ಕಳು ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಯಾವುದೇ ರೀತಿಯ ಅಪಪ್ರಚಾರ ಶ್ರೀ ಮಂಜುನಾಥರ ಶಕ್ತಿ ಕುಂದಿಸಲು ಸಾಧ್ಯವಿಲ್ಲ ಎಂದು ಧರ್ಮಸ್ಥಳ ಸಂಸ್ಥೆ ಯೋಜನಾಽಕಾರಿ ಕುಮಾರ ಬಣಕಾರ ಹೇಳಿದರು.
ಪಟ್ಟಣದ ಶ್ರೀ ಶಾಂಭವಿಮಾತಾ ಚಿಕ್ಕಮಠದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಏರ್ಪಡಿಸಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣಪುಟ್ಟ ಸಾಲಕ್ಕೂ ಅಣ್ಣ-ತಮ್ಮ, ಕುಟುಂಬದವರು, ಸಂಬAಽಕರು ಜÁಮೀನು ನೀಡದಿರುವಾಗ ಎಲ್ಲೂ ಇದ್ದು ಇನ್ನೆಲ್ಲೋ ಇರೋ ನಮಗೆಲ್ಲ ಸಾವಿರದಿಂದ ಐದು ಲಕ್ಷದವರೆಗಿನ ಸಾಲಕ್ಕೆ ಜಾಮೀನು ನೀಡಿ ಉತ್ತಮ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದಾರೆ ಧರ್ಮಸ್ಥಳ ಧರ್ಮಾಽಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಬಣ್ಣಿಸಿದರು.
೧೯೮೨ರಲ್ಲಿ ಆರಂಭಿಸಿದ ಈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುಜÁ್ಞನ ನಿಽ, ಜÁ್ಞನದೀಪ, ಜÁ್ಞನ ವಿಕಾಸ, ಗೆಳತಿ ಯೋಜನೆಗಳಡಿ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡು ಸುಖಿ ಜೀವನ ನಡೆಸುತ್ತಿದ್ದಾರೆ. ಸ್ಪೂರ್ತಿ ಜÁ್ಞನವಿಕಾಸ ಯೋಜನೆಯಡಿ ಹೆಣ್ಮಕ್ಕಳ ಸ್ವಾವಲಂಬಿ ಬದುಕಿಗಾಗಿ ಮೂರು ತಿಂಗಳು ಉಚಿತ ಹೊಲಿಗೆ ತರಬೇತಿ ಆರಂಭಿಸಲಾಗಿದೆ. ಗೆಳತಿ ಯೋಜನೆಯಡಿ ಕುಟುಂಬದಲ್ಲಿ ಯಾರಿಗೂ ಹೇಳಿಕೊಳ್ಳಲಾರದಂಥ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬಸವರಾಜ ಸಿನ್ನೂರ್ ಮಾತನಾಡಿದರು. ವಲಯ ಮೇಲ್ವಿಚಾರಕ ಬೀಸಯ್ಯ, ಸಮನ್ವಯಾಽಕಾರಿ ಶೋಭಾ, ಪತ್ರಕರ್ತ ವಿಶಾಲಕುಮಾರ ಶಿಂಧೆ, ದೇವಿಂದ್ರಪ್ಪ ವಿಶ್ವಕರ್ಮ ಇತರರಿದ್ದರು.