ಹಾರುಗೊಪ್ಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್​.ವಿ.ಯರಡ್ಡಿ, ಮಂಜುಳಾ ದಂಡಪ್ಪನವರ, ಪ್ರೀತಿ ಧಮಸೂರ, ವಿ.ಎ್​.ಮರಿತಮ್ಮಣ್ಣವರ, ಆಶಾದೇವಿ, ಎಸ್​.ಆರ್​.ಪಾಟೀಲ ಇದ್ದರು. 
ರಾಜ್ಯ

ಧರ್ಮಸ್ಥಳ ಸಂಸ್ಥೆ ವಿದ್ಯಾರ್ಥಿಗಳಿಗೆ ವರದಾನ

ಮುರಗೋಡ: ಶಾಲಾ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ವರದಾನವಾಗಿದೆ ಎಂದು ಮುಖ್ಯಶಿಕ್ಷಕ ಎಸ್​.ವಿ.ಯರಡ್ಡಿ ಹೇಳಿದರು. ಸಮೀಪದ ಹಾರುಗೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಸಮಾರಂಭಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಬಡ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಿರುವ ಸಾಲ ಸೌಲಭ್ಯದ ನೆರವು ಶ್ಲಾಘಿಸಿದರು. ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ನಿಂಗರಾಜ ಬಾಗೋಜಿ, ಪಾಂಡುರಂಗ ಖಿಲಾರಿ ಅವರನ್ನು ಸನ್ಮಾನಿಸಿ, ಪರಿಸರ ಮಾಲಿನ್ಯ ವಿಷಯ ಕುರಿತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮಂಜುಳಾ ದಂಡಪ್ಪನವರ, ಪ್ರೀತಿ ಧಮಸೂರ, ವಿ.ಎ್​.ಮರಿತಮ್ಮಣ್ಣವರ, ಆಶಾದೇವಿ, ಎಸ್​.ಆರ್​.ಪಾಟೀಲ, ಬಿ.ಐ ಚುಳಕಿ ಇದ್ದರು.