ಚಿಂಚೋಳಿಯಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರ ಪಾದಪೂಜೆ ಜರುಗಿತು. ವೀರೇಶ ಯಂಪಳ್ಳಿ, ಡಾ.ಸಂಗಮೇಶ ಮಂಡಿ, ಚನ್ನಬಸವ ಹಿರೇಮಠ, ಜಯಣ್ಣ ಡೋಲೆ ಇತರರಿದ್ದರು.
- ಹಾರಕೂಡ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿ
- ಚಿಂಚೋಳಿಯಲ್ಲಿ ಪಾದಪೂಜೆ
ಚಿಂಚೋಳಿ: ಯಾರು ದೇಹವೆಂಬ ಪ್ರಣತಿಯಲ್ಲಿ ಬತ್ತದ ಗುರುಭಕ್ತಿಯ ತೈಲ ತುಂಬಿರುವರೋ ಅಂತಹವರ ಬದುಕು ಸದ್ವಿಚಾರದ ಬತ್ತಿಯಿಂದ ಸುವಿಾನದ ದೀಪವಾಗಿ ಬೆಳಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿದರು.
ಪಟ್ಟಣದ ಹಾರಕೂಡ ಸಂಸ್ಥಾನದ ಶಾಖಾಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಗುರುವಂದನೆ ಮತ್ತು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಭೌತಿಕ ಐಶ್ವರ್ಯ ಬದುಕಿನ ಉದ್ದೇಶವಾಗದೆ, ನಿಸ್ವಾರ್ಥ ಸೇವಾ ಮನೋಭಾವದಿಂದ ಬಾಳು ಸುಂದರವಾಗಿ ರೂಪುಗೊಳ್ಳುತ್ತದೆ. ಲೋಭ, ಮೋಹವಿಲ್ಲದ ಭಕ್ತಿ ತುಂಬಿದ ಸಮಚಿತ್ತದ ಶಾಂತ ಮನಸ್ಸಿನಲ್ಲಿ ಹಾರಕೂಡ ಶ್ರೀ ಚೆನ್ನಬಸವ ಶಿವಯೋಗಿಗಳ ಅಂತ@ಕರಣದ ಗಂಗೆ ಆವಿರ್ಭವಿಸುತ್ತದೆ. ಬರುವ ದಿನಗಳು ಸರ್ವರಿಗೂ ಒಳಿತು ಮತ್ತು ಶ್ರೇಯಸ್ಸು ತರಲೆಂದು ಹಾರೈಸಿದರು.
ಮಲ್ಲಯ್ಯ ಶಾಸಿ ಐನಾಪುರ ಮಾತನಾಡಿದರು. ಪ್ರಮುಖರಾದ ಸುಭಾಷ ಸಿಳ್ಳಿನ, ರಾಜಶೇಖರ ಮಜ್ಜಗಿ, ವಿರುಪಾಪ್ಪ ಯಂಪಳ್ಳಿ, ಮಹಾಂತಯ್ಯ ಮಠಪತಿ, ಡಾ.ಸಂಗಮೇಶ ಮಂಡಿ, ಮಲ್ಲಿಕಾರ್ಜುನ ಅಲ್ಲಾಪುರ, ಚನ್ನಬಸವ ಹಿರೇಮಠ, ಜಯಣ್ಣ ಡೋಲೆ, ರಾಜು ಸಾಲಿ, ವೀರೇಶ ಯಂಪಳ್ಳಿ, ಸಂತೋಷ ಕಡಗದ, ಸಂತೋಷ ಸಿಳ್ಳಿನ ಇತರರಿದ್ದರು. ನಾಗರಾಜ ಕಲಬುರಗಿ ಸ್ವಾಗತಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.