ನಾಲವಾರದ ಕೋರಿಸಿದ್ಧೇಶ್ವರ ಮಠದಲ್ಲಿ ಭಕ್ತರ ಹರಕೆಯ ತನಾರತಿ ಮಹೋತ್ಸವದಲ್ಲಿ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೆಂದ್ರ ಶಿವಾಚಾರ್ಯರು ಸಾಂಪ್ರಾದಾಯಿಕ ಉಡುಪಿನಲ್ಲಿ ಭಾಗಿಯಾದರು.
ನಾಲವಾರ: ಪಟ್ಟಣದ ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಮಂಗಳವಾರ ಮಧ್ಯರಾತ್ರಿ ಭಕ್ತರು ತನಾರತಿ ಹೊತ್ತು ಹರಕೆ ಸಲ್ಲಿಸಿದರು. ಮಧ್ಯರಾತ್ರಿ ಭಕ್ತರು ಸ್ನಾನ ಮಾಡಿ ಮಡಿಯುಟ್ಟು, ಗೋಧಿ ಹಿಟ್ಟಿನ ದೀಪಗಳನ್ನು ಸಿದ್ಧಪಡಿಸಿಕೊಂಡು, ದೀಪಗಳನ್ನು ತಲೆ ಮೇಲೆ ಹೊತ್ತು ಕರ್ತೃ ಗದ್ದುಗೆಗೆ ಐದು ಪ್ರದಣೆ ಹಾಕಿದರು. ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಶ್ರೀಮಠದ ಪರಂಪರೆಯಂತೆ ವಿಶೇಷ ಪೋಷಾಕಿನೊಂದಿಗೆ ಕರ್ತೃ ಗದ್ದುಗೆಗೆ ಮಧ್ಯರಾತ್ರಿ ವಿಶೇಷ ಪೂಜೆ ಸಲ್ಲಿಸಿ, ತನಾರತಿ ಮಹೋತ್ಸವದಲ್ಲಿ ಪಾಲ್ಗೊಂಡರು.