ಪಿರಿಯಾಪಟ್ಟಣದ ಮಸಣೀಕಮ್ಮ ದೇವಾಲಯದಲ್ಲಿ ಕೊನೆಯ ಆಷಾಢ ಶುಕ್ರವಾರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. 
ರಾಜ್ಯ

‘ಕೊನೆಯ ಆಷಾಢ’ ದೇವಾಲಯಗಳಿಗೆ ಭಕ್ತರ ದಂಡು

ಪಿರಿಯಾಪಟ್ಟಣ:

ಕೊನೆಯ ಆಷಾಢ ಶುಕ್ರವಾರ ಅಂಗವಾಗಿ ಪಟ್ಟಣದಲ್ಲಿ ವಿವಿಧ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪಟ್ಟಣದ ಶಕ್ತಿದೇವತೆ ಮಸಣೀಕಮ್ಮ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರ ನೆರವೇರಿಸಿ ನಂತರ ವಾದ್ಯದ ಮೂಲಕ ಉತ್ಸವಮೂರ್ತಿಯ ಮೆರವಣಿಗೆಯನ್ನು ನಡೆಸಲಾಯಿತು. ಬೆಳಗ್ಗಿನಿಂದಲೇ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಕನ್ನಂಬಾಡಿಯಮ್ಮ ದೇವಾಲಯಲ್ಲಿ ಸಹ ದೇವಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.
ಮಸಣೀಕಮ್ಮ ದೇವಾಲಯಕ್ಕೆ ಶಾಸಕ ಕೆ.ವೆಂಕಟೇಶ್ ಭೇಟಿ ನೀಡಿ ದೇವಾಲಯದಲ್ಲಿ ವರ್ತಕರ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಸಾದ ವಿನಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಬಿ.ಜೆ.ಬಸವರಾಜು, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಮಾನ್ಸುನ್‌ಚಂದ್ರು, ಮುಖಂಡರಾದ ಕೆ.ಹೊಲದಪ್ಪ, ರವಿ, ಭುಜಂಗ, ಪಿ.ಎನ್.ಚಂದ್ರಶೇಖರ್, ಎಂ.ಸುರೇಶ್, ಜ್ಯೋತಿಗೌಡ, ಚಂದ್ರೇಗೌಡ, ಎಸ್.ರಾಮು, ನಾಗೇಶ್, ಸುನೀಲ್ ಸೇರಿದಂತೆ ಇತರರಿದ್ದರು.