ಗೋಕಾಕ ನಗರದಲ್ಲಿ ಮುರುರಾಜೇಂದ್ರ ಸ್ವಾಮೀಜಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಮತ್ತು ಗುರುವಂದನೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಅಮರಸಿದ್ಧೇಶ್ವರ ಸ್ವಾಮೀಜಿ, ರಮೇಶ ಜಾರಕಿಹೊಳಿ, ಈರಣ್ಣ ಕಡಾಡಿ, ರಾಚೋಟೇಶ್ವರ ಶಿವಾಚಾರ್ಯ, ಮಲ್ಲಿಕಾರ್ಜುನ ಈಟಿ ಇತರರಿದ್ದರು. 
ರಾಜ್ಯ

ಭಕ್ತರ ಶ್ರದ್ಧಾ ಕೇಂದ್ರ ಶೂನ್ಯ ಸಂಪಾದನಮಠ

ವಿಜಯವಾಣಿ ಸುದ್ದಿಜಾಲ ಗೋಕಾಕ
ಶೂನ್ಯ ಸಂಪಾದನಮಠ ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಜನಸಾಮಾನ್ಯರು ಹಾಗೂ ಗೋಕಾಕ ಸುತ್ತ&ಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರ ಪಾಲಿನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಮಹಾಲಕ್ಷಿ$್ಮ ಸಭಾಭವನದಲ್ಲಿ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುರಾಜೇಂದ್ರ ಸ್ವಾಮೀಜಿ 55ನೇ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ತುಲಾಭಾರ ಮತ್ತು ಗುರುವಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶ್ರೀಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಾಗಿದೆ. ಜತೆಗೆ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಮಾರ್ಗದರ್ಶಿಯಾಗಿದೆ ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮುರುರಾಜೇಂದ್ರ ಸ್ವಾಮೀಜಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಮುನ್ನಡೆಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.
ಮುರುರಾಜೇಂದ್ರ ಸ್ವಾಮೀಜಿ ಅವರಿಗೆ ನಾಣ್ಯಗಳಿಂದ 55 ಪ್ರತ್ಯೇಕ ತುಲಾಭಾರ ಸೇವೆ ಸಲ್ಲಿಸುವ ಮೂಲಕ ಭಕ್ತರು ಗುರುವಂದನೆ ಸಲ್ಲಿಸಿದರು. ಅಂಕಲಗಿ&ಕುಂದರಗಿ ಅಡವಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಮರಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಈರಣ್ಣ ಕಡಾಡಿ ಮುರುರಾಜೇಂದ್ರ ಸ್ವಾಮೀಜಿ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಗುರುವಂದನಾ ಸಮಿತಿ ಅಧ್ಯ ಮಲ್ಲಿಕಾರ್ಜುನ ಈಟಿ, ಮುಪ್ಪಯ್ಯನಮಠದ ರಾಚೋಟೇಶ್ವರ ಶಿವಾಚಾರ್ಯ, ಅಶೋಕ ಪೂಜಾರಿ, ಸವೋರ್ತ್ತಮ ಜಾರಕಿಹೊಳಿ, ಬಸನಗೌಡ ಪಾಟೀಲ, ಲಿಂಗಾಯತ ಮಹಿಳಾ ವೇದಿಕೆ ಅಧ್ಯೆ ಸೇವಂತಾ ಮುಚ್ಚಂಡಿಹಿರೇಮಠ, ಸ್ವಾಗತ ಸಮಿತಿ ಕಾರ್ಯದರ್ಶಿ ವಿವೇಕ ಜತ್ತಿ, ಕೋಶಾಧ್ಯ ಶಂಕರ ಗೋರೋಶಿ, ಸುವರ್ಣಾತಾಯಿ ಹೊಸಮಠ ಇತರರಿದ್ದರು.