Devices for the disabled 
ರಾಜ್ಯ

ಅಂಗವಿಕಲರಿಗೆ ಸಾಧನ ಸಲಕರಣೆ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಂಗವಿಕಲರಿಗೆ ಕೃತಕ ಅಂಗಗಳ ಜೋಡಣೆ ಹಾಗೂ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಕೈಗೊಳ್ಳಲಾಯಿತು.
ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಾನ ಮತ್ತು ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್​ , ಶ್ರೀ ಭಗವಾನ್​ ಮಹಾವೀರ ಅಂಗವಿಕಲ ಸಹಾಯಹಸ್ತ ಸಮಿತಿ, ಜಿಲ್ಲಾ ವಿಕಲಾಂಗ ಪುನರ್ವಸತಿ ಕೇಂದ್ರ, ಶ್ರೀ ಸಾಯಿ ಇಂಟರ್​ ನ್ಯಾಷನಲ್​ ಚಾರಿಟಬಲ್​ ಟ್ರಸ್ಟ್​ನೇತೃತ್ವದಲ್ಲಿ ಕೈಗೊಂಡಿದ್ದ ಶಿಬಿರದಲ್ಲಿ ಮೈಸೂರು, ಕಲಬುರಗಿ, ಬಿಜಾಪುರ, ರಾಯಚೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯ ಅಂಗವಿಕಲರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಸಾಯಿ ಇಂಟರ್​ ನ್ಯಾಷನಲ್​ ಚಾರಿಟಬಲ್​ ಟ್ರಸ್ಟ್​ ಅಧ್ಯ ಡಾ.ಕೆ.ಎನ್​.ಮೂರ್ತಿ, ವೈದ್ಯರಾದ ಡಾ.ರುಪತಿ, ಕಮಲ್​ ಮೆಹತಾ ಮತ್ತಿತರರು ಇದ್ದರು.

ಕೃತಕ ಕಾಲು, ಕ್ಯಾಲಿಪರ್​ ಖಾಲಿ ಕುರ್ಚಿ, ಕ್ಲಚರ್​, ವಾಕಿಂಗ್​ ಸ್ಟಿಕ್​, ವೈಟ್​ ಕ್ಯಾನ್​, ಶೂಸ್​, ಶ್ರವಣ ಯಂತ್ರ, ವೈಟ್​ ಕ್ಯಾನ್​, ಬೈಸಿಕಲ್​ ಸೇರಿದಂತೆ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ವಿವಿಧ ವಿಭಾಗದ 230ಕ್ಕೂ ಹೆಚ್ಚು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡರು.
ವೈದ್ಯರಾದ ಡಾ.ರುಪತಿ, ಕಮಲ್​ ಮೆಹತಾ, ಡಾ. ಪನೀಂದ್ರ, ಜಯಚಂದ್ರ, ಅಶೋಕ್​, ಶ್ರೀ ಸಾಯಿ ಇಂಟರ್​ ನ್ಯಾಷನಲ್​ ಚಾರಿಟಬಲ್​ ಟ್ರಸ್ಟ್​ ಅಧ್ಯ ಡಾ. ಕೆ.ಎನ್​.ಮೂರ್ತಿ ಮತ್ತಿತರರು ಇದ್ದರು.