₹150 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಪೂರ್ಣ Development
- ಶಾಸಕಿ ರೂಪಕಲಾ ಹೇಳಿಕೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕೆಜಿಎಫ್: ಸ್ವಾತಂತ್ರ್ಯ ಹೋರಾಟಗಾರರು, ನಾಯಕರು ಮತ್ತು ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಮಹಾನ್ ವ್ಯಕ್ತಿಯನ್ನು ನೆನಪು ವಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಶಾಸಕಿ ರೂಪಕಲಾ ಹೇಳಿದರು. Development
ನಗರಸಭಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಾತನಾಡಿ, ಕಳೆದ ಎರಡೂವರೆ ವರ್ಷದಲ್ಲಿ ಸುವಾರು 150 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುವಾರು 100 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಶಾಲಾ ಕೊಠಡಿಗಳ ನಿರ್ವಾಣ, ವಾದರಿ ಅಂಗನವಾಡಿಗಳ ನಿರ್ವಾಣ, ಶುದ್ಧ ಕುಡಿಯುವ ನೀರಿನ ಟಕಗಳ ನಿರ್ವಾಣ, ಬೀದಿ ದೀಪಗಳನ್ನು ಅಳವಡಿಸುವುದು, ಸೇತುವೆಗಳ ನಿರ್ವಾಣ, ಗ್ರಾಮೀಣ ರಸ್ತೆ, ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ಹೀಗೆ ಹತ್ತು ಹಲವು ವಲಯಗಳಲ್ಲಿ ಅಭಿವೃದ್ಧಿ ಕಾರ್ಯ ವಾಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಬಡ ಕುಟುಂಬಗಳ ಮಕ್ಕಳ ಅನುಕೂಲಕ್ಕಾಗಿ ಕ್ಯಾಸಂಬಳ್ಳಿ ಹೋಬಳಿಯಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ (ಮುರಾರ್ಜಿ ದೇಸಾಯಿ) ಮಂಜೂರು, ತಾಲೂಕಿನ ರಾಮಸಾಗರ, ಕ್ಯಾಸಂಬಳ್ಳಿ ಮತ್ತು ಕೆಜಿಎಫ್ ನಗರ ಸೇರಿ 3 ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಲಭಿಸಲಿದೆ ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜನರಲ್ ಆಸ್ಪತ್ರೆ ಬಗ್ಗೆ ಸರ್ಕಾರದ ಹಂತದಲ್ಲಿ ಪದೇಪದೆ ಪ್ರಸ್ತಾಪಿಸುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಇತ್ತೀಚೆಗೆ ಒಂದು ಉನ್ನತಮಟ್ಟದ ಸಮಿತಿ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಅವಶ್ಯಗಳ ಬಗ್ಗೆ ಪರಿಶೀಲಿಸಿದ್ದು, ವರದಿಯನ್ನು ಸರ್ಕಾರಕ್ಕೆ ನೀಡಲಿದೆ. ಶ್ರೀ ಆಸ್ಪತ್ರೆಗೆ ಸಂಪೂರ್ಣ ವೈದ್ಯಕೀಯ ಸಿಬ್ಬಂದಿಯೊಂದಿಗೆ ಒಂದು ಆಧುನಿಕ ಸ್ಪರ್ಶ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ವಾತನಾಡಿ, ಅಧಿಕಾರವು ಯಾವುದೇ ವ್ಯಕ್ತಿ, ರಾಜ ಅಥವಾ ಸರ್ಕಾರಕ್ಕೆ ಸೇರಿಲ್ಲ, ಬದಲಾಗಿ ಸಂವಿಧಾನ ಮತ್ತು ಜನರಿಗೆ ಸೇರಿದೆ ಎಂಬುದನ್ನು ಗಣರಾಜ್ಯೋತ್ಸವ ನಮಗೆ ನೆನಪಿಸುತ್ತದೆ. ಈ ದಿನವು ಹಕ್ಕುಗಳನ್ನು ಆಚರಿಸುವುದರ ಜತೆಗೆ ನಮ್ಮ ಕರ್ತವ್ಯಗಳನ್ನು ಸಹ ನೆನಪಿಸುತ್ತದೆ ಎಂದರು. ನಾವೆಲ್ಲರೂ ಸವಾನರು ಮತ್ತು ನಮ್ಮ ದೇಶದ ಆಡಳಿತದಲ್ಲಿ ನಮಗೆ ಪಾಲು ಇದೆ ಎಂಬುದನ್ನು ನೆನಪಿಸುತ್ತದೆ. ದೇಶದ ವಿವಿಧ ಜಾತಿಗಳು, ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಒಂದುಗೂಡಿಸಲು ಅವಕಾಶ ಒದಗಿಕೊಡಲಾಗಿದೆ ಎಂದರು.