ಸೇಡಂ ತಾಪಂ ಸಭಾಂಗಣದಲ್ಲಿ ಪಂಚಾಯತ್ರಾಜ್ ದಿನ ಆಚರಿಸಲಾಯಿತು. ಬಿ.ಆರ್.ಅಣ್ಣಾಸಾಗರ, ಚನ್ನಪ್ಪ ರಾಯಣ್ಣವರ್, ಮಾರುತಿ ಹುಜರತಿ ಇತರರಿದ್ದರು. ===
- ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಆರ್.ಅಣ್ಣಾಸಾಗರ ಹೇಳಿಕೆ
- ತಾಪಂ ಕಚೇರಿಯಲ್ಲಿ ಪಂಚಾಯತ್ರಾಜ್ ದಿನ
ಸೇಡಂ : ಅಧಿಕಾರ ವಿಕೇಂದ್ರಿಕರಣದಿಂದ ಅಭಿವೃದ್ಧಿಯಾಗಲು ಸಾಧ್ಯವೆನ್ನುವುದನ್ನು ಮನಗಂಡ ಸರ್ಕಾರಗಳು ಮೂರು ಹಂತದ ಪಂಚಾಯತ್ರಾಜ್ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತಂದಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪೊ.ಬಿ.ಆರ್.ಅಣ್ಣಾಸಾಗರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಪಂಚಾಯತ್ರಾಜ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಯೋಜನೆ ಜಾರಿಗೆ ತಂದರೂ ಕೆಳಹಂತದ ನೌಕರರಾದ ನೀವು ಉತ್ತಮವಾಗಿ ಕೆಲಸ ಮಾಡದಿದ್ದರೆ ಫಲ ಸಿಗುವುದಿಲ್ಲ. ಪಂಚಾಯಿತಿ ನೌಕರರೆಂದರೆ ಗ್ರಾಮೀಣ ಭಾಗದ ಉದ್ಧಾರಕರಿದ್ದಂತೆ. ನಿತ್ಯ ಜನರ ನೋವು, ಸಮಸ್ಯೆಗೆ ಸ್ಪಂದಿಸುವುದಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ತಾಪಂ ಇಒ ಚನ್ನಪ್ಪ ರಾಯಣ್ಣವರ್ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿಗಾಗಿಯೇ ಸ್ಥಾಪಿಸಲಾದ ಪಂಚಾಯತ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ಸಮರ್ಪಣಾ ಭಾವದಿಂದ ಸೇವೆ ಮಾಡಬೇಕು. ಅಂದಾಗ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತಿ ಮಾತನಾಡಿದರು. ವಕೀಲ ಶಂಕರ ರಮಾನಂದ ವಿಶೇಷ ಉಪನ್ಯಾಸ ನೀಡಿದರು. ಉತ್ತಮ ಸೇವೆಗೈದ ಅಭಿವೃದ್ಧಿ ಅಧಿಕಾರಿ, ಕಂಪ್ಯೂಟರ್ ಆಪ್ರೇಟರ್, ಕರವಸೂಲಿಗಾರರು, ತಾಪಂ ಕಚೇರಿ ಸಿಬ್ಬಂದಿಯನ್ನು ವಿಶೇಷವಾಗಿ ಸತ್ಕರಿಸಲಾಯಿತು. ಜ್ಯೋತಿ ಪ್ರಾರ್ಥಿಸಿದರು. ರಾಮಪ್ಪ ಸ್ವಾಗತಿಸಿದರು. ದೇವೀಂದ್ರನಾಯಕ ನಿರೂಪಣೆ ಮಾಡಿ, ವಂದಿಸಿದರು.