ಗುರುಮಠಕಲ್​ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಶರಣಬಸವ, ಕಿರಣಕುಮಾರ, ಬಸವರಾಜ ಸಜ್ಜನ್​, ಈರಪ್ಪ ಕನ್ನಳ್ಳಿ, ಶರಣಬಸವ, ಮಲ್ಲಿಕಾರ್ಜುನ ಸಜ್ಜನ್​, ಅನುರಾಧ, ಸುಭಾಶಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಮಹೇಂದ್ರರಡ್ಡಿ ಕಂದಕೂರ ಇತರರಿದ್ದರು. 
ರಾಜ್ಯ

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನಡೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಆರೋಪ
  • ಗೋಪಾಳಪುರ ಸೇರಿ ವಿವಿಧೆಡೆ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಗುರಮಠಕಲ್​: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಆರೋಪಿಸಿದರು.
ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದ ಕಾರಣ ಹಳ್ಳಿಗಳಲ್ಲಿ ಮೂಲಸೌಕರ್ಯ ಸೇರಿ ಯಾವುದೇ ಅಭಿವೃದ್ಧಿಗೆ ಸಹಕರಿಸಲು ಆಗುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಹಿನ್ನಡೆಯಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೆಟ್ಟದಳ್ಳಿ ಗ್ರಾಮಸ್ಥರು ನಮಗೆ ಮೂರು ಬಾರಿ ಚುನಾವಣೆಯಲ್ಲಿ ಲೀಡ್​ ಕೊಟ್ಟಿದ್ದೀರಿ. ಆದರೆ ಕಳೆದ ಚುನಾವಣೆಯಲ್ಲಿ ನನ್ನ ಮೇಲೆ ಮುನಿಸಿಕೊಂಡಿರಿ. ಆದರೂ ಈ ಎತ್ತು ದುಡಿಯುವುದು ನಿಲ್ಲಿಸಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪ್ರಮುಖ ಗುರಿಯಾಗಿಟ್ಟುಕೊಂಡು ನಾನು ಮುನ್ನೆಡೆಯುತ್ತಿದ್ದೇನೆ ಎಂದರು.
ಗೋಪಾಳಪುರ ಜನರ ಕುಂದು-ಕೊರತೆ ಆಲಿಸಿದ ಶಾಸಕರು, ಪ್ರತಿ ವರ್ಷ ನಮಗೆ ಸರ್ಕಾರದಿಂದ ಬರುವ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಬೇಕಾದರೆ ಸ್ವಲ್ಪ ಸಮಯ ಬೇಕು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮಕ್ಕೆ 10 ಲಕ್ಷ ರೂ.ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನವಾಬುರ್ಜ್​-ಗೋಪಾಳಪುರ ರಸ್ತೆ ಸುಧಾರಣೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿನ ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಸರ್ಕಾರದಿಂದ ಅನುದಾನ ಬರಬೇಕಾದರೆ ಮೊದಲು ಟ್ರಸ್ಟ್​ ಇರಬೇಕು ಅಂದಾಗ ಮಾತ್ರ ಸರ್ಕಾರದ ಹಣ ಬಿಡುಗಡೆ ಮಾಡಬಹುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕರ ನೇಮಕಾತಿಗೆ ಸರ್ಕಾರ ಮುಂದಾದರೆ ನಮ್ಮ ೇತ್ರದಲ್ಲಿ ಶಿಕರ ಸಮಸ್ಯೆ ನೀಗಲಿದೆ. 2015-16ರಲ್ಲಿ ಕೆರೆಗಳ ಹೂಳೆತ್ತಲು ಬಂದಿದ್ದ ಸುಮಾರು 5 ಕೋಟಿ ರೂ. ಅಧಿಕಾರಿ ಮತ್ತು ಜನಪ್ರತಿನಿಧಿಗಳು ಅನಾಮತ್ತಾಗಿ ಎತ್ತಿ ಹಾಕಿದ ಕಾರಣ ಮತ್ತೆ ಸರ್ಕಾರದಿಂದ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ ಎಂದರು.
ಈ ವೇಳೆ ಗೋಪಾಳಪುರ ಗ್ರಾಮದಲ್ಲಿ ಕೆಕೆಆರ್​ಡಿಬಿಯಿಂದ ಶಾಲಾ ತರಗತಿ ಕೋಣೆ ನಿರ್ಮಾಣ, ಚಿನ್ನಾಕಾರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ-2 ನಿರ್ಮಾಣಕ್ಕೆ ಅಡಿಗಲ್ಲು, ಬೆಟ್ಡದಳ್ಳಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಧರ್ಮಪುರ ತಾಂಡಾದಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ಎರಡು ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಎಇಇ ಶರಣಬಸವ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಉಪ ತಹಸೀಲ್ದಾರ್​ ಬಸವರಾಜ ಸಜ್ಜನ್​, ಬಿಇಒ ಈರಪ್ಪ ಕನ್ನಳ್ಳಿ, ಸಿಡಿಪಿಒ ಶರಣಬಸವ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್​, ಅನುರಾಧ, ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಮಹೇಂದ್ರರಡ್ಡಿ ಕಂದಕೂರ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಆನಂದ ವಡವಟ, ನರಸಿಂಹಲು ಚಿಂತಗುಅಟಾ, ಆನಂದ ಶಿಳ್ಳೆ, ನಾರಾಯಣ ಕೊಂಕಲ್​, ಭೀಮರಾಯ ಕೊಂಕಲ್​, ಶರಣಗೌಡ ಗುಂಜನೂರ, ಮೋದಿನ್​ಸಾಬ ಗುಂಜನೂರ, ಬಸವರಾಜ ಹಳ್ಳಿ, ಬುಗ್ಗಾರಡ್ಡಿ ಧರ್ಮಾಪೂರ, ಚಿನ್ನಾಕರ ಗ್ರಾಮದ ಶರಣಗೌಡ ಚಂದಾನೂರ, ಶರಣಗೌಡ ಚಿನ್ನಾಕಾರ, ಸಿದ್ದಪ್ಪಗೌಡ ಹಳಿಮನಿ, ವಿಜಯರಡ್ಡಿ, ಪ್ರವಿಣ, ಗೋಪಾಳಪುರ ಗ್ರಾಮದ ಅನಂತರಡ್ಡಿ, ಆನಂದ, ಹಣಮರಡ್ಡಿ, ಮಹಾದೇವಪ್ಪ, ಸೂಗಪ್ಪ ಸಾಹು ಗಣಪೂರ, ಮಲ್ಲಣ್ಣ ಗಣಪೂರ, ಜಗದೀಶ್​ ಬುರ್ಜ್​ ತಾಂಡ, ಬೆಟ್ಟದಳ್ಳಿ ತಾಂಡಾದ ಶಂಕರ ರಾಠೋಡ ಇತರರಿದ್ದರು.
"

ತಾಂಡಾ ನಿವಾಸಿಗಳು ಮೊದಲು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ. ನಿಮ್ಮ ಮಕ್ಕಳಿಗೆ ಅನುಕೂಲವಾಗುವ ಎಲ್ಲ ರೀತಿಯ ಸೌಲಭ್ಯ ಒದಗಿಸಲು ನಾನು ಬದ್ಧ. ಇದುವರೆಗೂ ಯಾರು ನಿಮ್ಮ ಊರು, ತಾಂಡಾಗಳಿಗೆ ಬಂದು ಸಮಸ್ಯೆ ಆಲಿಸಿಲ್ಲ ಆದರೆ ನಾನು ಸ್ಥಳಿಯವಾಗಿದ್ದೇನೆ.

— > ಶರಣಗೌಡ ಕಂದಕೂರ ಶಾಸಕ ಗುರುಮಠಕಲ್​