ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಂಸ್ಕತಿ ಉತ್ಸವ ‘ಅನಾದ್ಯಂತ-2026’ಕ್ಕೆ ಜಿಇ ಹೆಲ್ತ್‌ಕೇರ್ ಸಂಸ್ಥೆಯ ಉಪಾಧ್ಯಕ್ಷ ವಿವಾಸ್ವನ್ ಶಾಸ್ತ್ರಿ ಚಾಲನೆ ನೀಡಿದರು. ನಟ ವಿರಾಟ್ ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.  
ರಾಜ್ಯ

ತಂತ್ರಜ್ಞಾನ, ಸಂಸ್ಕೃತಿ ಒಟ್ಟಿಗೆ ಸಾಗಿದಾಗ ಅಭಿವೃದ್ಧಿ ಸಾಧ್ಯ; ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಅನಾದ್ಯಂತ

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನ, ಸಂಸ್ಕೃತಿ ಒಟ್ಟಿಗೆ ಸಾಗಿದಾಗ ಅಭಿವೃದ್ಧಿ ಸಾಧ್ಯ
  • ಜಿಇ ಹೆಲ್ತ್​ಕೇರ್ ಉಪಾಧ್ಯಕ್ಷ ವಿವಾಸ್ವನ್ ಶಾಸ್ತ್ರಿ ಅಭಿಮತ
  • ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಅನಾದ್ಯಂತ-2026

ಬೆಂಗಳೂರು:ತಂತ್ರಜ್ಞಾನಮತ್ತು ಸಂಸ್ಕತಿ ಒಟ್ಟಿಗೆ ಸಾಗಿದಾಗಭಾರತವು ಅಭಿವೃದ್ಧಿಯೊಂದಿಗೆವಿಶ್ವಮಟ್ಟಕ್ಕೆ ಹೋಗಬಹುದು.ಭಾರತ ಜಗತ್ತಿನತಂತ್ರಜ್ಞಾನದ ಶಕ್ತಿಕೇಂದ್ರವಾಗುವತ್ತದಾಪುಗಾಲನ್ನಿಡುತ್ತಿದ್ದು ಇದಕ್ಕೆ ಕಾರಣ ಸಂಸ್ಕತಿಯ ಸಾಂಗತ್ಯಹಾಗೂ ಸ್ವದೇಶೀಕರಣದ ಪ್ರಕ್ರಿಯೆಎಂದು ಜಿಇ ಹೆಲ್ತ್‌ಕೇರ್ ಸಂಸ್ಥೆಯಉಪಾಧ್ಯಕ್ಷ ವಿವಾಸ್ವನ್ ಶಾಸ್ತ್ರಿಹೇಳಿದ್ದಾರೆ.

ಶುಕ್ರವಾರಬೆಂಗಳೂರಿನ ನಿಟ್ಟೆ ಮೀನಾಕ್ಷಿತಾಂತ್ರಿಕ ಮಹಾವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದತಂತ್ರಜ್ಞಾನ ಹಾಗೂ ಸಂಸ್ಕತಿಉತ್ಸವ ‘ಅನಾದ್ಯಂತ-2026’ಕ್ಕೆವಿಧ್ಯುಕ್ತವಾಗಿ ಚಾಲನೆ ನೀಡಿಮಾತನಾಡಿದರು.

ಪ್ರತಿತಾಂತ್ರಿಕ ವಿದ್ಯಾರ್ಥಿಯೂ ತನ್ನಶಕ್ತಿಯನ್ನು ಗುರುತಿಸಿ,ಅಲ್ಲಿ ತನ್ಮಯತೆಯಿಂದಗಮನ ಕೇಂದ್ರೀಕರಿಸಿ ಮುಂದುವರೆಯಬೇಕು.ಆಗ ವೈಯಕ್ತಿಕಶಕ್ತಿಯೊಡನೆ ಕೌಶಲದ ಒಗ್ಗೂಡುವಿಕೆಯಿಂದದೌರ್ಬಲ್ಯಗಳನ್ನೂ ನಿಯಂತ್ರಿಸಬಹುದುಎಂದು ವಿವಾಸ್ವನ್ ಹೇಳಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದನಟ ವಿರಾಟ್,ಸ್ವತಃ ಇಂಜಿನಿಯರಿಂಗ್ಪದವೀಧರನಾದ ನಾನು ಕಲಾರಂಗದಲ್ಲಿಹೆಜ್ಜೆಯಿಡಲು ತಂತ್ರಜ್ಞಾನದಅರಿವು ಹಾಗೂ ತಾರ್ಕಿಕ ದಷ್ಟಿಕೋನನೆರವಾದವು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್,ವಿವಿಧ ವಿಭಾಗಗಳಮುಖ್ಯಸ್ಥರಾದ ಡಾ.ಹಿತಾ ಡಿ.ಶೆಟ್ಟಿ,ಡಾ.ರಾಮಚಂದ್ರ ಎ.ಸಿ.,ಡಾ.ಜೆ.ಸುಧೀರ್ ರೆಡ್ಡಿ,ಅನುಶ್ರವ ಹಾಗೂಹದ್ಯಾ ಉಪಸ್ಥಿತರಿದ್ದರು.

ಈ ಎರಡುದಿನಗಳ ಉತ್ಸವದದಲ್ಲಿ ತಂತ್ರಜ್ಞಾನ,ಸಾಂಸ್ಕತಿಕಹಾಗೂ ಕ್ರೀಡಾ ಕ್ಷೇತ್ರದಲ್ಲಿಅನೇಕ ಸ್ಪರ್ಧೆಗಳು ಹಾಗೂ ವಿವಿಧಪ್ರದರ್ಶನಗಳು ನಡೆಯಲಿವೆ.ದೇಶದ ವಿವಿಧೆಡೆಗಳಲ್ಲಿರುವಇಂಜಿನಿಯರಿಂಗ್ ಕಾಲೇಜುಗಳ 6ಸಾವಿರಕ್ಕೂಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಅನಾದ್ಯಂತ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ಸಾಂಸ್ಕತಿಕ ಉತ್ಸವಗಳ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಅನ್ವೇಷಕರನ್ನಾಗಿಸುವ ನಿಟ್ಟಿನಲ್ಲಿ ವೇಗವರ್ಧಕಗಳಂತೆ ಕೆಲಸ ಮಾಡಲಿದೆ.