ವಿಜಯಪುರದ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ದೇವನಹಳ್ಳಿ ಶ್ರೀ ವೆಂಕಟೇಶ್ವರ ವಾಣಿಜ್ಯ ವಿದ್ಯಾ ಶಾಲೆ ಸಂಸ್ಥಾಪಕ ಪ್ರಾಂಶುಪಾಲ ಎನ್.ಪುಟ್ಟರಾಜ್ ವಿತರಿಸಿದರು. ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಉಪನ್ಯಾಸಕ ಕೆ.ಎಂ.ನಾಗರಾಜ್ ಇತರರಿದ್ದರು.
ವಿಜಯಪುರ : ನಿತ್ಯ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ದೇವನಹಳ್ಳಿ ಶ್ರೀ ವೆಂಕಟೇಶ್ವರ ವಾಣಿಜ್ಯ ವಿದ್ಯಾ ಶಾಲೆ ಸಂಸ್ಥಾಪಕ ಪ್ರಾಂಶುಪಾಲ ಎನ್.ಪುಟ್ಟರಾಜ್ ಹೇಳಿದರು.
ಪಟ್ಟಣದ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಕ್ರಿಕೆಟ್, ಫುಟ್ಬಾಲ್, ಬ್ಯಾಸ್ಕೆಟ್ಬಾಲ್ನಂತಹ ಆಧುನಿಕ ಕ್ರೀಡೆಗಳಲ್ಲದೆ, ಕಬಡ್ಡಿ, ಬುಗುರಿ, ಚಿನ್ನಿದಾಂಡು, ಲಗೋರಿ, ಹಗ್ಗ&ಜಗ್ಗಾಟ ಮುಂತಾದ ಸಾಂಪ್ರದಾಯಿಕ ಆಟಗಳೂ ಗ್ರಾಮೀಣ ಕ್ರೀಡೆಗಳ ಒಂದು ಭಾಗ. ಆದ್ದರಿಂದ ಕ್ರೀಡೆಗಳು ಮನರಂಜನೆಗೆ ಮಾತ್ರವಲ್ಲದೇ ಬದುಕಿನಲ್ಲಿ ನಾಯಕತ್ವ ಗುಣ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತವೆ ಎಂದರು.
ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಪ್ರದಿಪ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾಯಲ್ಲಿ ಭಾಗವಹಿಸುವಿದರಿಂದ ಸೋಲು ಗೆಲುವಿನ ಪಾಠ ಕಲಿಯುತ್ತಾರೆ ಎಂದು ಹೇಳಿದರು. ಪ್ರಶಸ್ತಿ ವಿಜೇತ ತಂಡಕ್ಕೆ ಶ್ರೀ ಸಾಯಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಿ.ಮಂಜುನಾಥ್ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಸನ್ಮಾನಿಸಿದರು. ಕ್ರೀಡಾ ಪಟುಗಳಾದ ಶಟಲ್ ಬ್ಯಾಡ್ಮಿಂಟನ್ ತಂಡದ ನಾಯಕ ಪುನೀತ್, ಉಪನಾಯಕ ಭರತ್, ನಿಖಿಲ್, ಶ್ರೇಯಸ್, ಚರಣ್, ಪುನೀತ್ ಇತರರು ಇದ್ದರು.