ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಭುವನೇಶ ಕುಮಾರ್ ಜತೆ ಅಫಜಲಪುರ ಕ್ಷೇತ್ರದ ಧಾರ್ಮಿಕ ತಾಣಗಳ ಅಭಿವೃದ್ಧಿ ಕುರಿತು ಶಾಸಕ ಎಂ.ವೈ.ಪಾಟೀಲ್ ಚರ್ಚಿಸಿದರು. ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಇದ್ದರು.
- ಶಾಸಕ ಎಂ.ವೈ.ಪಾಟೀಲ್ ಮನವಿ
- ಕೇಂದ್ರ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಭುವನೇಶಕುಮಾರ್ ಜತೆ ಚರ್ಚೆ
ಅಫಜಲಪುರ: ದೇವಲಗಾಣಗಾಪುರದ ದತ್ತಾತ್ರೇಯ ಮಹಾರಾಜ ದೇಗುಲ ಹಾಗೂ ಘತ್ತರಗಾದ ಭಾಗ್ಯವಂತಿ ದೇವಿ ಸೇರಿ ಮತಕ್ಷೇತ್ರದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕುರಿತು ಕೇಂದ್ರದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಭುವನೇಶ ಕುಮಾರ್ ಜತೆ ನವದೆಹಲಿಯಲ್ಲಿ ಚರ್ಚಿಸಲಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ತಿಳಿಸಿದ್ದಾರೆ.
ಗಾಣಗಾಪುರ ಮತ್ತು ತ್ತರಗಾ ಕ್ಷೇತ್ರಗಳು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಅಭಿವೃದ್ಧಿಪಡಿಸಿದರೆ ಸ್ಥಳಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು ಉದ್ಯೋಗಾವಕಾಶ ಹೆಚ್ಚುವುದರ ಜತೆಗೆ ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೂ ಪೂರಕವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ.ಉಮಾಶಂಕರ್ ಅವರನ್ನು ಸಹ ಭೇಟಿಯಾಗಿ ಚೌಡಾಪುರದಿಂದ ದೇವಲ ಗಾಣಗಾಪುರಕ್ಕೆ ಚೆನ್ನೆ&ಸೂರತ್ ಆರ್ಥಿಕ ಕಾರಿಡಾರ್ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಮಾರ್ಣ ಹಾಗೂ ಕಲಬುರಗಿಯಿಂದ ಅತನೂರ (ಚೆನ್ನೆ&ಸೂರತ್ ಎಕ್ಸ್ಪ್ರೆಸ್ವೇ ಜಂಕ್ಷನ್)ವರೆಗೆ ರಾಷ್ಟ್ರೀಯ ಹೆದ್ದಾರಿ -150ಇ ಅನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಮಹಾರಾಷ್ಟ್ರ ಗಡಿಯ ಮುರುಮ್ನಿಂದ ವಿಜಯಪುರ ಜಂಕ್ಷನ್ವರೆಗೆ ದ್ವಿಪಥ ರಸ್ತೆ ಅಗಲೀಕರಣ ಹಾಗೂ ಸಮಗ್ರ ಸುಧಾರಣಾ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್, ಕಲಬುರಗಿ&ಬೀದರ್&ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ಇದ್ದರು.
"
ಕೇಂದ್ರದ ಪಿಎಂ ಇ ಡ್ರೆವ್ ಯೋಜನೆ ಅಡಿ ಮಂಜೂರಾಗಿರುವ ವಿದ್ಯುತ್ಚಾಲಿತ ಬಸ್ಗಳ ಜತೆ ಹೆಚ್ಚುವರಿ ಇ-ಬಸ್ಗಳನ್ನು ನೀಡಬೇಕು. ಇದರಿಂದ ಪರಿಸರಸ್ನೇಹಿ ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಹೆದ್ದಾರಿ ಕಾರ್ಯದರ್ಶಿ ವಿ.ಉಮಾಶಂಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
— > ಅರುಣಕುಮಾರ ಪಾಟೀಲ್ ಕೆಕೆಆರ್ಟಿಸಿ ಅಧ್ಯಕ್ಷ