Develop skills rather than positions 
ರಾಜ್ಯ

ಹುದ್ದೆಗಳಿಗಿಂತ ಕೌಶಲ ವೃದ್ಧಿಸಿಕೊಳ್ಳಿ

ತುಮಕೂರು ಡೆಸ್ಕ್
ತುಮಕೂರು: ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಹುದ್ದೆಗಳಿಗಿಂತ ಕೌಶಲಗಳನ್ನು ರೂಢಿಸಿಕೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು ಎಂದು ಆಂಧ್ರಪ್ರದೇಶದ ಪೆನುಕೊಂಡದ ಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ಸಿ.ಬಿ.ಪಾಟೀಲ್ ಹೇಳಿದರು.
ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯಾಂತ್ರಿಕ ವಿಭಾಗದಿಂದ ‘ಮೊಮೆಂಟು-2026’(ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ವಿಚಾರ ಸಂಕಿರಣ) ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಕಾಲಾನುಸಾರ ಅಗತ್ಯಗಳಿಗೆ ತಕ್ಕಂತೆ ಕಲಿಯಿರಿ, ಮರೆತುಬಿಡಿ ಹಾಗೂ ಮರುಕಲಿಯಿರಿ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಎಸ್‌ಐಟಿ ಸಿಇಒ ಡಾ.ಶಿವಕುಮಾರಯ್ಯ, ಎಸ್‌ಐಟಿ ಪ್ರಾಚಾರ್ಯ ಡಾ.ಎಸ್.ವಿ.ದಿನೇಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ವಿರುಪಾಕ್ಷಿ ಔರಾದಿ, ಸಂಯೋಜಕ ಡಾ.ಎ.ಜಿ.ಶಿವಸಿದ್ಧರಾಮಯ್ಯ, ಖಜಾಂಚಿ ಡಾ.ಟಿ.ವಿ.ವಿನೀತ ಕುಮಾರ್, ವಿದ್ಯಾರ್ಥಿ ಸಂದ ಅಧ್ಯಕ್ಷ ಅನೀಶ್, ಕಾರ್ಯದರ್ಶಿಗಳಾದ ಎಚ್.ಬಿ.ಮಧು, ಜೆ.ಎಸ್.ಜೀವಿತಾ ಮತ್ತಿತರರು ಉಪಸ್ಥಿತರಿದ್ದರು.