ಹೊಸಕೋಟೆ ತಾಲೂಕಿನ ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಲೋತ್ಸವವನ್ನು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಯಶೋದಾ ಮುಗಳಿ ಉದ್ಘಾಟಿಸಿದರು. ಪ್ರಾಂಶುಪಾಲ ವೆಂಕಟೇಶ್​, ಸಿಅರ್ಪಿ ಮಂಜುನಾಥ್​, ಡಿ.ಲಕ್ಷಿ$್ಮನಾರಾಯಣ್​, ಸೈಯದ್​ ಮಹಬೂಬ್​ ಇದ್ದರು.  
ರಾಜ್ಯ

ಕಲಾತ್ಮಕ ಅಭಿರುಚಿ ಬೆಳೆಸಿಕೊಳ್ಳಿ / SULIBELE

ಬೆಂಗಳೂರು ಗ್ರಾಮಾಂತರ ಡೆಸ್ಕ್
ಸೂಲಿಬೆಲೆ : ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಹೆಚ್ಚಿನ ಅವಕಾಶಗಳಿದ್ದು, ಪ್ರತಿಯೊಬ್ಬರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಾತ್ಮಕ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಶ್ರೀನಿವಾಸಪ್ಪ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಲೋತ್ಸವದಲ್ಲಿ ಮಾತನಾಡಿದ ಅವರು, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಲಾತ್ಮಕ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಗೀತ, ಜನಪದನೃತ್ಯ ಸೇರಿ ಇತರ ಸ್ಪರ್ಧೆಗಳನ್ನು ಆಯೋಜಿಸಿದ್ದು, ಸೂಕ್ತ ವೇದಿಕೆ ನೀಡಿ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಯಶೋದಾ ಮುಗುಳಿ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆ&ಕಾಲೇಜು ಮಕ್ಕಳಗೆ ಕಲೆಯ ಬಗ್ಗೆ ಅಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಜಾರಿ ಮಾಡಿದೆ. ವಿದ್ಯಾರ್ಥಿಗಳು ಕಲಾತ್ಮಕ ಪ್ರದರ್ಶನಕ್ಕೆ ಸೂಕ್ತ ವೇದಿಕೆ ನಿರ್ಮಿಸಲಾಗಿದೆ ಎಂದು ಹೇಳಿದರು.
ವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಲಕ್ಷಿ$್ಮನಾರಾಯಣ್​ ಮಾತನಾಡಿ, ಪಾಲಕರು ಮಕ್ಕಳಿಗೆ ಅಸಕ್ತಿ ಇರುವ ಕ್ಷೇತ್ರದಲ್ಲಿ ಬೆಳಯುವ ಅವಕಾಶ ನೀಡಬೇಕು. ಕೇವಲ ಪಠ್ಯದಿಂದ ಜೀವನ ಸಾಗುವುದಿಲ್ಲ. ಕಲೆಗೆ ಸಮಾಜಿಕವಾಗಿ ಉತ್ತಮ ಅವಕಾಶಗಳಿದ್ದು, ಸಾಧನೆಗೆ ಕಲಾರಂಗ ಸೂಕ್ತ ವೇದಿಕೆಯಾಗಿದೆ ಎಂದರು.
ಕ್ಲಸ್ಟರ್​ ಸಂಪನ್ಮೂಲ ವ್ಯಕ್ತಿ ಮಂಜುನಾಥ್​, ಪ್ರಾಂಶುಪಾಲ ವೆಂಕಟೇಶ್​, ಜೇನುಗೂಡು ಟ್ರಸ್ಟ್​ ನಿರ್ದೇಶಕ ಸೈಯದ್​ ಮಹಬೂಬ್​, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​, ಜನತಾಕಾಲನಿ ಶಾಲೆ ಮುಖ್ಯಶಿಕ್ಷಕಿ ಯಶೋಧಾ, ಪತ್ರಕರ್ತ ಪ್ರಶಾಂತ್​, ಅತ್ತಿಬೆಲೆ ಮಂಜುನಾಥ್​, ನಾರಾಯಣಸ್ವಾಮಿ, ಉಮೇಶ್​ ಇತರರು ಇದ್ದರು.