ಕಲಬುರಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾ ಅಕಾಡೆಮಿ ಸಮಾರೋಪದಲ್ಲಿ ಕ್ರೀಡಾಪಟು ಚೈತ್ರಾ ಬಿ., ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ, ಡಾ.ರಾಮಕೃಷ್ಣರೆಡ್ಡಿ, ಡಾ.ದಶರಥಮೇತ್ರೆ, ಡಾ.ಮಿಲಿಂದ ಸುಳ್ಳದ್​, ಡಾ.ಲಕ್ಷ್ಮೀಪುತ್ರ, ಡಾ.ಪಿಂಕ್ಯಾಯಿನಿ ಇತರರಿದ್ದರು 
ರಾಜ್ಯ

ನಿರಂತರ ಕಲಿಕೆ ಮನೋಭಾವ ಬೆಳೆಸಿಕೊಳ್ಳಿ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಚೈತ್ರಾ ಹೇಳಿಕೆ
  • ಎಸ್​ಬಿ ಕಾಲೇಜಿನಲ್ಲಿ ಕಲಾ ಅಕಾಡೆಮಿ ಸಮಾರೋಪ
ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮಲ್ಲಿ ಛಲ ಇದ್ದರೆ ಮಾತ್ರ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಚೈತ್ರಾ ಬಿ. ಹೇಳಿದರು.
ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ ಕಲಾ ಅಕಾಡೆಮಿ ಸಮಾರೋಪ ಮತ್ತು ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ, ಶಿಸ್ತು, ನೈತಿಕ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಕಲಿಕೆಯ ಮನೋಭಾವ ಅಗತ್ಯವಿದೆ ಎಂದರು.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ ಮಾತನಾಡಿ, ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಿ, ಆ ಕನಸು ನನಸಾಗಿಸಲು ಸ್ಪಷ್ಟವಾದ ಗುರಿ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಎಷ್ಟೇ ಕಷ್ಟಗಳು ಎದುರಾದರೂ ನಿಮ್ಮ ಗುರಿಯಿಂದ ವಿಚಲಿತರಾಗಬೇಡಿ ಎಂದು ಕಿವಿಮಾತು ಹೇಳಿದರು.
ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ಉನ್ನತ ಶಿಕ್ಷಣ, ಉದ್ಯೋಗ, ಉದ್ಯಮ ಅಥವಾ ಯಾವುದೇ ೇತ್ರ ಆಯ್ಕೆ ಮಾಡಿದರೂ ಸಮಾಜದ ಅಭಿವೃದ್ಧಿಗೆ ನಿಮ್ಮ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗಿರಿ. ರಾಷ್ಟ್ರಮಟ್ಟದಲ್ಲಿ ಸಾಧನೆಗೈದವರನ್ನು ಮಾದರಿಯಾಗಿಸಿಕೊಂಡು ಸಾಧನೆಯ ಶಿಖರವನ್ನೆರಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ್​ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಡಾ.ಲಕ್ಷಿ$್ಮಪುತ್ರ ಸ್ವಾಗತಿಸಿದರು. ಅನಿತಾ ಗೊಬ್ಬುರ್​, ಹೆಬ್ಜಿಬಾ ನಿರೂಪಣೆ ಮಾಡಿದರು. ಡಾ.ಆರತಿ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು.
"

6ನೇ ತರಗತಿಯಲ್ಲಿರುವಾಗಲೇ ಖೋಖೋ ಆಟದಲ್ಲಿ ನಿರಂತರ ಪಯತ್ನ ಪಟ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದೆ. 2025ರಲ್ಲಿ ಖೋಖೋ ವಿಶ್ವಕಪ್​ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದೇನೆ. ದೇಶಕ್ಕಾಗಿ ಆಟವಾಡಿದ್ದು ಹೆಮ್ಮೆ ಎನಿಸುತ್ತದೆ.

— > ಚೈತ್ರಾ ಬಿ., ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು
"

ನಿರಂತರ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆಯಬೇಕು. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಗುರು, ಪಾಲಕರು ಮತ್ತು ನೀವು ಕಲಿತ ಸಂಸ್ಥೆ ಮರೆಯಬಾರದು. ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ನೀವು ಕಂಡ ಕನಸು ನನಸಾಗಲಿ. ಜೀವನದಲ್ಲಿ ಉತ್ತಮ ಯಶಸ್ಸು ದೊರೆಯಲಿ.

— > ಡಾ.ಸುರೇಶಕುಮಾರ ನಂದಗಾಂವ್​, ಪ್ರಾಚಾರ್ಯ, ಎಸ್​ಬಿ. ಕಲಾ ಕಾಲೇಜು