ಗುರುಗುಣ ಸಾಧನೆಗೆ ದೃಢಮನಸ್ಸು ಮುಖ್ಯ achieving Guruguna 
ರಾಜ್ಯ

ಗುರುಗುಣ ಸಾಧನೆಗೆ ದೃಢಮನಸ್ಸು ಮುಖ್ಯ achieving Guruguna

ಚಿಕ್ಕಬಳ್ಳಾಪುರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್​.ಜಯರಾಮ್​ ಅಭಿಮತ
ಚಿಂತಾಮಣಿ: ಚಂಚಲವಾದ ಮನಸ್ಸಿನಿಂದ ಗುರುಗುಣವನ್ನು ಸಾಧಿಸುವುದು ಸಾಧ್ಯವಿಲ್ಲ. ಮುಖ್ಯವಾಗಿ ಮನಸ್ಸು ಸದೃಢವಾಗಿ ಇರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್​.ಜಯರಾಮ್​ ತಿಳಿಸಿದರು. achieving Guruguna
ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ರಾಮಭವತಾರಕ ಮಂತ್ರದ ರಾಮಕೋಟಿ ಜಪಯವನ್ನು ಉದ್ಘಾಟಿಸಿ ಮಾತನಾಡಿ, ಗುರುವಿನ ಅನುಗ್ರಹದಿಂದ ಜೀವಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯನ್ನು ಪಡೆಯುವಂತಾಗುತ್ತದೆ. ಸುಸ್ಥಿರವಾದ ನಿಶ್ಚಯಗಳನ್ನು ಶಿಷ್ಯನಲ್ಲಿ ಮೂಡುವಂತೆ ಗುರು ಮಾಡುತ್ತಾನೆ. ಶಿಷ್ಯನಲ್ಲಿ ಗೂಡುಕಟ್ಟಿಕೊಂಡಿರುವ ಅಜ್ಞಾನವನ್ನು ಕ್ರಮವಾಗಿ ತೊಲಗಿಸುತ್ತಾನೆ. ಇದರಿಂದಾಗಿ ಹಿಂದಿನ ಪೂರ್ವಕರ್ಮಗಳೆಲ್ಲವೂ ಸುಟ್ಟು ಭಸ್ಮವಾಗುತ್ತದೆ. ಕರ್ಮಗಳ ನಾಶದಿಂದ ಅಂತರಂಗದ ಸ್ವಚ್ಛತೆಯಾಗುತ್ತದೆ. ಶಿಷ್ಯನು ಶುದ್ಧನಾಗಿ ಪರಮಾತ್ಮನ ಬಿಂಬ ಹೃದಯದಲ್ಲಿ ಮೂಡಲು ಅರ್ಹನಾಗುತ್ತಾನೆ.
ಆತ್ಮಜ್ಞಾನ ಪಡೆದ ಗುರುವನ್ನು ಆಶ್ರಯಿಸಬೇಕು. ಶ್ರದ್ಧೆಭಕ್ತಿಗಳಿಂದ ಗುರುಸೇವೆ ಮಾಡಿದ ಶಿಷ್ಯನ ಮೇಲೆ ದಯೆ ಮೂಡಿದ ಗುರುವು ಅಂತರಂಗದ ಸಂದೇಹಗಳನ್ನು ಪರಿಹರಿಸುತ್ತಾನೆ. ಕಷ್ಟಪಟ್ಟು ದುಡಿದರ ಮೂಲಕ ಬಂದಷ್ಟರಿಂದಲೇ ತೃಪ್ತನಾಗಿ ಕಾಲಕಳೆಯುತ್ತಾನೆ. ಅತಿಯಾದ ಆಸೆಯನ್ನು ತೊರೆಯುತ್ತಾನೆ.ಸ್ಥಿರಚಿತ್ತದಿಂದ ಇರುವ ಸಾಧಕನು ನೋಟ, ಮನಸ್ಸನ್ನು ಒಂದೇ ದಾರಿಯಲ್ಲಿ ನಡೆಯುವಂತೆ ಮಾಡುತ್ತಾನೆ ಎಂದರು.
ಮೊದಲಿಗೆ ಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲ್ಮ, ಯೋಗಾ ನರಸಿಂಹಸ್ವಾಮಿ, ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ಸೀತಾ ರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರಗಳನ್ನು, ಮಧ್ಯದಲ್ಲಿ ದೀಪಸ್ತಂಭ ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ದೀಪವನ್ನು ಬೆಳಗುವುದರ ಮೂಲಕ ರಾಮಕೋಟಿ ಜಪಯಕ್ಕೆ ಚಾಲನೆ ನೀಡಿದರು.
ರಾಮಕೋಟಿಯನ್ನು ಅಖಂಡ 24 ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹ ಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲ್ಮ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು.1ಗಂಟೆಗೆ ಒಂದು ತಂಡವು ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.
ಉಪನ್ಯಾಸಕ ವೆಂಕಟರವಣಪ್ಪ ಮಾತನಾಡಿದರು.ವಿದುಷಿ ಸರೋಜಮ್ಮ, ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಯೋಜನೆ ಸಂಚಾಲಕ ವಿದ್ವಾನ್​ ವಾನರಾಶಿ ಬಾಲಕೃಷ್ಣ ಭಾಗವತರ್​, ವಿವಿಧ ಭಾಗಗಳಿಂದ ಬಂದ ಭಕ್ತರು ಇದ್ದರು.