ಸೇಡಂನಲ್ಲಿ ಆಯೋಜಿಸಿದ್ದ ಎಸ್ಐಆರ್ ಪ್ರಕ್ರಿಯೆ ಬಿಎಲ್ಎ&2ಗಳ ವಿಶೇಷ ಸಭೆಯನ್ನು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಉದ್ಘಾಟಿಸಿದರು. ಸಿದ್ದಾಜಿ ಪಾಟೀಲ್, ಅಶೋಕ ಬಗಲಿ, ಶರಣು ಮೆಡಿಕಲ್ ಇತರರಿದ್ದರು.
- ರಾಜಕುಮಾರ ಪಾಟೀಲ್ ಕರೆ
- ಸೇಡಂನಲ್ಲಿ ಬಿಎಲ್ಎ-2ಗಳ ವಿಶೇಷ ಸಭೆ
ಸೇಡಂ: ಮತದಾರರ ಪಟ್ಟಿಯಿಂದ ಮೃತರ ಹೆಸರು ತೆಗೆದು ಹಾಕುವುದು, ಏಕವ್ಯಕ್ತಿ ವಿವಿಧೆಡೆ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದರೆ ಅದನ್ನು ಅಳಿಸುವುದು ಸೇರಿ ವಿವಿಧ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಚುನಾವಣಾ ಆಯೋಗ ಎಸ್ಐಆರ್ ಕಾರ್ಯ ಆರಂಭಿಸುತ್ತಿದ್ದು, ಇದರಿಂದಾಗಿ ರಾಜ್ಯದ ಮತಪಟ್ಟಿ ಶುದ್ಧೀಕರಣಗೊಳ್ಳಲಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ಚಿಂಚೋಳಿ ರಸ್ತೆಯಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಶನಿವಾರ ಆಯೋಜಿಸಿದ್ದ ಎಸ್ಐಆರ್ ಪ್ರಕ್ರಿಯೆಯ ಬಿಎಲ್ಎ&2ಗಳ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಬಿಎಲ್ಎ&2ಗಳ ಕಾರ್ಯ ಪ್ರಮುಖವಾಗಿದೆ. ನಕಲಿ ಹಾಗೂ ವಲಸೆ ಮತದಾರರನ್ನು ಪತ್ತೆಹಚ್ಚುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಎಸ್ಐಆರ್ ಪ್ರಕ್ರಿಯೆಯ ಬಿಜೆಪಿ ಮಂಡಲ ಪ್ರಭಾರಿ ಸಿದ್ದಾಜಿ ಪಾಟೀಲ್ ಮಾತನಾಡಿ, ಸರ್ಕಾರ ಈಗಾಗಲೇ ಮನೆಗಳ ಮ್ಯಾಪಿಂಗ್ ಕಾರ್ಯ ಸಂಪೂರ್ಣಗೊಳಿಸಿದೆ. ಇದೀಗ ಮತದಾರರ ಗಣತಿ ಕಾರ್ಯ ಆರಂಭವಾಗಲಿದ್ದು, ಅನರ್ಹರನ್ನು ಕೈಬಿಡುವ ಕೆಲಸವಾಗಲಿದೆ. ಹಾಗಾಗಿ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟು ಹೋಗದಂತೆ ನಮ್ಮ ಬಿಎಲ್ಎ&2ಗಳು ನಿಗಾವಹಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮುಖಂಡ ಕಲ್ಯಾಣಪ್ಪ ಪಾಟೀಲ್ ಮಾತನಾಡಿದರು.
ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ್ ರಾಯಕೋಡ, ಪ್ರಮುಖರಾದ ತಿರುಪತಿ ಶಹಬಾದಕರ್, ರಾವೇಂದ್ರ ಮೆಕಾನಿಕ್, ಸತೀಶ ಪಾಟೀಲ್ ತರನಳ್ಳಿ, ಶೈಲಜಾ ಹಿತ್ತಲ್, ವಿನೋದ ಸಾಹುಕಾರ, ನಾಗರೆಡ್ಡಿ ದೇಶಮುಖ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ವೆಂಕಟರೆಡ್ಡಿ ಪಾಟೀಲ್ ವಿಶ್ವನಾಥರೆಡ್ಡಿ ಪಾಟೀಲ್, ಪಾಪಯ್ಯಗೌಡ್, ವಿಠ್ಠಲರೆಡ್ಡಿ ಪಾಟೀಲ್, ನಾಗಭೂಷಣರೆಡ್ಡಿ ಹೂಡಾ, ಸಿದ್ದು ಬಾನರ್, ಶಿವಕುಮಾರ ತೊಟ್ನಳ್ಳಿ, ಬನ್ನಪ್ಪ ಕುಂಬಾರ, ನಾರಾಯಣರಾವ ಕುಲಕರ್ಣಿ, ಮಹಿಪಾಲರೆಡ್ಡಿ ಪಾಟೀಲ್, ಶ್ರೀಕಾಂತರೆಡ್ಡಿ ಮುಧೋಳ, ರಾಮು ನಾಯಕ್, ಜ್ಯೋತಿ ಶಹಬಾದಕರ್, ಶೋಭಾ ಹೂಗಾರ, ವೀರಮ್ಮ ಪಾಟೀಲ್, ಮಹಾದೇವಪ್ಪ ಗೋಣಿ, ನಾಗರೆಡ್ಡಿ ಮುಧೋಳ, ಭೀಮು ನಾಯಕ್, ರಾಮು ಕಣೇಕಲ್, ಬಸವರಾಜಗೌಡ ದೇವನೂರ ಇತರರಿದ್ದರು.
ಶರಣು ಕೆರಳ್ಳಿ ಪ್ರಾರ್ಥಿಸಿದರು. ಓಂಪ್ರಕಾಶ ಪಾಟೀಲ್ ತರನಳ್ಳಿ ಸ್ವಾಗತಿಸಿದರು. ಶರಣು ಮೆಡಿಕಲ್ ಪ್ರಾಸ್ತಾವಿಕ ಮಾತನಾಡಿದರು. ನಾಗಪ್ಪ ಕೊಳ್ಳಿ ನಿರೂಪಣೆ ಮಾಡಿದರು.
"
ಒಬ್ಬ ವ್ಯಕ್ತಿ ಒಂದು ಮತ ಎನ್ನುವ ಪ್ರಜಾಪ್ರಭುತ್ವದ ಆಶಯದಂತೆ ತಾವೆಲ್ಲರೂ ಕಾರ್ಯನಿರ್ವಹಿಸಬೇಕು. ಒಂದೇ ಹೆಸರಿನಲ್ಲಿ ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದಲ್ಲಿ ಆೇಪಣೆ ಸಲ್ಲಿಸಬೇಕು. ನಿಮ್ಮ ಬೂತ್ ಮಟ್ಟದಲ್ಲಿರುವ ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು.
— > ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಶಾಸಕ