- * ಹೂ-ಹಣ್ಣಿನ ದರದಲ್ಲಿ ಭಾರಿ ಏರಿಕೆ
- * ತರಕಾರಿ ದರ ತುಸು ಇಳಿಕೆ
ಧನ- ಕನಕದ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರುಕಟ್ಟೆಗಳು ಕಳೆಗಟ್ಟಿದ್ದು, ಹಬ್ಬಕ್ಕೆ ಮೂರ‌್ನಾಲ್ಕು ದಿನಗಳು ಇರುವಾಗಲೇ ಖರೀದಿ ಜೋರಾಗಿ ನಡೆದಿದೆ. ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ ಹಬ್ಬದಂದು ದರ ಇನ್ನೂ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಮಂಗಳವಾರವೇ ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ಕೆ.ಆರ್. ಮಾರುಕಟ್ಟೆಯಲ್ಲಿ ದಟ್ಟಣೆಯ ನಡುವೆಯೇ ಜನರು ಹೂವು- ಹಣ್ಣು ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರ, ಗಾಂಧಿ ಬಜಾರ್, ಮಡಿವಾಳ ಸೇರಿ ಸಮೀಪದ ಮಾರುಕಟ್ಟೆಗಳಿಗೆ ತೆರಳಿ ಹೂಹಣ್ಣುಗಳ ಜತೆಗೆ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ತರಕಾರಿ ದರ ಇಳಿಕೆ:
ಹಬ್ಬಕ್ಕೆ ಹೂವು ಹಣ್ಣು ದರ ಏರಿಕೆ ನಡುವೆ ತರಕಾರಿ ದರ ಕೊಂಚ ಇಳಕೆ ಆಗಿರುವುದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಬೀನ್ಸ್, ಟೊಮ್ಯಾಟೊ, ಬದನೆ, ಬಟಾಣಿ, ನುಗ್ಗೆ ಸೇರಿ ಎಲ್ಲ ಬಗೆಯ ತರಕಾರಿ ಹಾಗೂ ಸೊಪ್ಪುಗಳು ದರ ಇಳಿಕೆಯಾಗಿದೆ. ಹಾಗಾಗಿ ಹಬ್ಬಕ್ಕೆ ವಿಶೇಷ ಅಡುಗೆ ತಯಾರಿಗಾಗಿ ಗ್ರಾಹಕರು ತರಕಾರಿ ಖರೀದಿಯೂ ಮಾಡುತ್ತಿದ್ದರು.
ಅಂಗಡಿ ಮಳಿಗೆಗಳಲ್ಲಿ ಜನದಟ್ಟಣೆ:
ರವಮಹಾಲಕ್ಷ್ಮಿ ಹಬ್ಬ ಆಚರಿಸುವವರು ದೇವಿಗೆ ಸೀರೆ ಉಡಿಸಿ ಅಲಂಕರಿಸುತ್ತಾರೆ. ಬಂದವರಿಗೆ ತಾಂಬೂಲದ ಜತೆಗೆ ರವಿಕೆ ಮತ್ತು ಬಳೆ ನೀಡುತ್ತಾರೆ. ಜತೆಗೆ ಬಹುತೇಕರು ಶ್ರಾವಣದಲ್ಲಿ ಮಂಗಳಗೌರಿ ವ್ರತ ಆಚರಿಸುವುದರಿಂದ ಹೆಣ್ಣುಮಕ್ಕಳಿಗೆ ಬಾಗಿನ ಕೊಡಲು ಬಹುತೇಕರು ಈಗಲೇ ಸೀರೆ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಮಂಗಳವಾರ ಬಟ್ಟೆ ಅಂಗಡಿಗಳು ಹಾಗೂ ್ಯಾನ್ಸಿ ಸ್ಟೋರ್‌ಗಳು, ಒಡವೆ ಅಂಗಡಿಗಳು ಮಹಿಳೆಯರಿಂದ ತುಂಬಿದ್ದವು.
ರೆಡಿಮೇಡ್ ಲಕ್ಷ್ಮೀಯರು:
ಮಾರುಕಟ್ಟೆಗಳಲ್ಲಿ ಆಕರ್ಷಕ ರೆಡಿಮೇಡ್ ಲಕ್ಷ್ಮೀಯರಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ ಲಕ್ಷ್ಮೀ ಪೂಜೆಗೆ ಅಲಂಕಾರ ಮಾಡಲು ಅಗತ್ಯವಾದ ಸ್ಟಾೃಂಡ್, ಬಣ್ಣದ ಕಾಗದ, ಬಲೂನು, ಕೃತಕ ಹಾರ, ಹೂಗಳು ಲಭ್ಯವಿವೆ. ಲಕ್ಷ್ಮೀಯ ವಿಗ್ರಹ 2,500 ರೂ.ಗಳಿಂದ 8 ಸಾವಿರ ರೂ. ವರೆಗೆ ಮಾರಾಟವಾಗುತ್ತಿವೆ.
ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ದರ (ಪ್ರತಿ ಕೆ.ಜಿ.ಗೆ)
ಮಲ್ಲಿಗೆ, ಮಳ್ಳೆ
₹300- ₹500