ತಲ್ಲೂರ ಗ್ರಾಮದ ದೇಸಾಯಿ ಕೋಟೆ ಆವರಣದಲ್ಲಿ ತಾಪಂ ಮಾಜಿ ಅಧ್ಯ, ಪಿಕೆಪಿಎಸ್ ಅಧ್ಯ ವಿನಯಕುಮಾರ ದೇಸಾಯಿ ಅವರ ಜನ್ಮದಿನದ ನಿಮಿತ್ತ ದಂಪತಿಯನ್ನು ಸನ್ಮಾನಿಸಲಾಯಿತು.
ತಲ್ಲೂರ: ರಾಜಕೀಯದ ಮೂಲಕ ಸಮಾಜಮುಖಿ ಕೆಲಸ ಮಾಡುತ್ತ ಬಡವರ ಸುಖಕ್ಕಾಗಿ ದೇಸಾಯಿ ಕುಟುಂಬ ಶ್ರಮಿಸುತ್ತಿದೆ. ವಿನಯಕುಮಾರ ದೇಸಾಯಿ ಅವರ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಹೇಳಿದರು.
ಗ್ರಾಮದ ದೇಸಾಯಿ ಕೋಟೆ ಆವರಣದಲ್ಲಿ ತಾಪಂ ಮಾಜಿ ಅಧ್ಯ, ಬಿಜೆಪಿ ಮುಖಂಡ ವಿನಯಕುಮಾರ ದೇಸಾಯಿ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿನಯಕುಮಾರ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು. ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಮಾತನಾಡಿ, ಅಭಿಮಾನಿಗಳು, ಸ್ನೇಹಿತರ ಪ್ರೀತಿ, ಕಾಳಜಿಗೆ ನಾನು ಚಿರಋಣಿ ಎಂದರು.
ಕೇಕ್ ಕತ್ತರಿಸುವ ಮೂಲಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದವರೊಂದಿಗೆ ವಿನಯ ದೇಸಾಯಿ 60ನೇ ಜನ್ಮದಿನ ಆಚರಿಸಿಕೊಂಡರು. ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು ವಿತರಿಸಿದರು.
ತೊರಗಲ್ಲಮಠದ ದೀಪಕ ಸ್ವಾಮಿ, ಪ್ರಸನ್ನ ಶಾಸ್ತ್ರಿ, ಕಮಲಾ ದೇಸಾಯಿ, ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ನಿವೃತ್ತ ಮುಖ್ಯಶಿಕ ಎ.ವಿ.ಇಂಗಳೆ, ಬಸವರಾಜ ಪೂಜೇರ, ಚಂಬಣ್ಣ ಲಕ್ಕನ್ನವರ, ಮಾರುತಿ ಕುಲಮಗೇರಿ, ಎಂ.ವಿ.ಉಪ್ಪಿನ, ಎಂ.ಎ.ಗಾಣಿಗೇರ, ಬಸಪ್ಪ ಲಕ್ಕನ್ನವರ, ಪಿಕೆಪಿಎಸ್ ಉಪಾಧ್ಯ ವೀರಪ್ಪ ಬೆನಕಟ್ಟಿ, ಮಲ್ಲಿಕಾರ್ಜುನ ಅಣ್ಣಿಗೇರಿ ಇತರರು ಇದ್ದರು. ಚನ್ನಮ್ಮ ತುಪ್ಪದ ನಿರೂಪಿಸಿ, ವಂದಿಸಿದರು.