ಭಾರತ ಚುನಾವಣಾ ಆಯೋಗದ ಉಪ ಆಯುಕ್ತ ಸಂಜಯ್​ ಕುಮಾರ್​ ನೆಲಮಂಗಲದಲ್ಲಿ ಎಸ್​ಐಆರ್​ ಪ್ರಕ್ರಿಯೆ ಪರಿಶೀಲನೆ ನಡೆಸಿದರು. ವಿಧಾನಸಭಾ ೇತ್ರದ ಮತದಾರರ ನೋಂದಣಾಧಿಕಾರಿ ಪ್ರಕಾಶ್​, ಸಹಾಯಕ ಮತದಾರರ ನೋಂದಣಾಧಿಕಾರಿ ಮಲ್ಲೇಶ್​, ೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್​ ಇದ್ದರು. 
ರಾಜ್ಯ

ನೆಲಮಂಗಲಕ್ಕೆ ಚುನಾವಣಾ ಆಯೋಗದ ಉಪ ಆಯುಕ್ತ ಭೇಟಿ / NELAMANGAL

ನೆಲಮಂಗಲ : ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗದ ಉಪ ಆಯುಕ್ತ ಸಂಜಯ್​ ಕುಮಾರ್​ ಮಂಗಳವಾರ ಪರಿಶೀಲಿಸಿದರು. ರಾಯನ್​ನಗರ ಬಳಿಯ ಕೆಎಸ್​ಆರ್​ಟಿಸಿ ಬಡಾವಣೆಯಲ್ಲಿ ನಡೆಯುತ್ತಿದ್ದ ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಸಂಜಯ್​ ಕುಮಾರ್​ ಹಾಗೂ ಜಿಲ್ಲಾಧಿಕಾರಿ ಒಳಗೊಂಡ ವಿಶೇಷ ತಂಡ ಪರಿಶೀಲಿಸಿತು.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ನಗರದ ಮತಗಟ್ಟೆಗೆ ಭೇಟಿ ನೀಡಿದ ಸಂಜಯ್​ ಕುಮಾರ್​ ಪರಿಶೀಲನೆ ನಡೆಸಿದ್ದು, ಜು.9ರವರೆಗೆ ಅವರು ಕರ್ನಾಟಕದಲ್ಲಿರಲಿದ್ದಾರೆ. ಜುಲೈ 9ರಂದು ಮಹಾರಾಷ್ಟ್ರಕ್ಕೆ ತೆರಳಲಿದ್ದು, ಈ ಮೂರೂ ದಿನಗಳಲ್ಲಿ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ, ಸಮಾಲೋಚನೆಗಳನ್ನು ನಡೆಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಭೇಟಿ: ಭಾರತ ಚುನಾವಣಾ ಆಯೋಗದ ಉಪ ಆಯುಕ್ತರು ಪರಿಶೀಲಿಸಿ ತೆರಳಿದ ಬಳಿಕ ಜಿಲ್ಲಾಧಿಕಾರಿ ಡಾ.ಕೆ.ಎನ್​. ಅನುರಾಧಾ ಅವರು ಮತಗಟ್ಟೆ ಸಂಖ್ಯೆ 212ರ ಎಚ್​.ಕೆಂಪಲಿಂಗನಹಳ್ಳಿ ಭೇಟಿ ನೀಡಿ ಎಸ್​ಐಆರ್​ ಪ್ರಕ್ರಿಯೆ ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು.
ನಗರಸಭೆ ಪೌರಾಯುಕ್ತ ಗಂಗಾಧರ್​, ರಾಜಸ್ವ ನಿರೀಕ್ಷಕ ಚಂದ್ರಶೇಖರ್​, ಗ್ರಾಮ ಆಡಳಿತಾಧಿಕಾರಿ ರೋಹಿತ್​, ಮತಗಟ್ಟೆ ಅಧಿಕಾರಿ ಅಪ್ಪಸಾಹೇಬ್​ ಗಾಣಿಗರ್​, ನಾಗವೇಣಿ ಇದ್ದರು.