ಶಹಾಪುರದನ ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್​ನಲ್ಲಿ ಹಣ ದುರುಪಯೋಗ ಖಂಡಿಸಿ ಠೇವಣಿದಾರರು ಶುಕ್ರವಾರ ಬ್ಯಾಂಕ್​ ಎದುರು ಶುಕ್ರವಾರದಿಂದ ಧರಣಿ ಆರಂಭಿಸಿದರು. ಚನ್ನಪ್ಪ ಆನೇಗುಂದಿ, ಎಸ್​.ಎಂ.ಸಾಗರ, ಮಹ್ಮದ್​ ಇಸ್ಮಾಯಿಲ್​ ತಿಮ್ಮಾಪುರ, ಡಾ.ಸಂಗಣ್ಣ ಗೋಗಿ ಇತರರಿದ್ದರು. 
ರಾಜ್ಯ

ಬ್ಯಾಂಕ್​ ಎದುರು ಠೇವಣಿದಾರರಿಂದ ಧರಣಿ

ಪ್ರಮುಖ ಮುಖ್ಯಾಂಶಗಳು

  • ಶಹಾಪುರನ ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್​ನಲ್ಲಿ ಹಣ ದುರಪಯೋಗ ಆರೋಪ
ಶಹಾಪುರ: ಠೇವಣಿದಾರರ ಮತ್ತು ಸದಸ್ಯರ ಠೇವಣಿ ಹಣ ಹಾಗೂ ಬ್ಯಾಂಕ್​ನ ಷೇರುದಾರರ ಹಣ ದುರುಪಯೋಗ ಮಾಡಿದ್ದಾರೆಂದು ಆರೋಪಿಸಿ ಠೇವಣಿದಾರರು ಶುಕ್ರವಾರ ನಗರದ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಬ್ಯಾಂಕ್​ ಎದುರು ಧರಣಿ ಆರಂಭಿಸಿದರು.
ಬ್ಯಾಂಕ್​ನಲ್ಲಿ ಸುಮಾರು 267 ಠೇವಣಿದಾರರು ಸುಮಾರು 10 ಕೋಟಿಗೂ ಅಧಿಕ ಹಣ ಠೇವಣಿ ಇಡಲಾಗಿದೆ. ಬ್ಯಾಂಕ್​ನ ಆಡಳಿತ ಮಂಡಳಿ ಸದಸ್ಯರನ್ನು ನಂಬಿ ಬಡ ಕೂಲಿ ಕಾರ್ಮಿಕರು ಠೇವಣಿ ರೂಪದಲ್ಲಿ ಇಟ್ಟಿದ್ದಾರೆ. ಸಂಪೂರ್ಣ ಹಣವನ್ನು ಬ್ಯಾಂಕ್​ನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತಕ್ಷಣ ಈ ಹಣವನ್ನು ವಾಪಸ್ಸು ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬ್ಯಾಂಕ್​ 2013ರಿಂದ ಆರಂಭಗೊಂಡಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ನಂಬಿ ಬ್ಯಾಂಕ್​ನಲ್ಲಿ ಠೇವಣಿ ಇರಿಸಲಾಗಿದೆ. ಬ್ಯಾಂಕ್​ನಲ್ಲಿ ಅವ್ಯವಹಾರ ನಡೆದಿರುವುದು ಗೊತ್ತಾಗಿದ್ದು, ಸುಮಾರು 16 ಕೋಟಿ ಹಣ ದುರ್ಬಳಕೆ ಕುರಿತು ಅಧ್ಯಕ್ಷರನ್ನು ಕೇಳಿದರೆ ನಕಲಿ ಸಹಿ ಮಾಡಿ ಹಣ ಲಪಟಾಯಿಸಿದ್ದಾರೆ ಎಂದು ಸಮಜಾಯಿಸಿ ನೀಡುತ್ತಿದ್ದಾರೆ ಎಂದು ಹೇಳಿದರು. ಈ ಕುರಿತು ಪೊಲೀಸರಿಗೆ ದೂರು ನೀಡಲು ಹೋದರೆ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ರೈತ ಮುಖಂಡರಾದ ಚನ್ನಪ್ಪ ಆನೇಗುಂದಿ, ಎಸ್​,ಎಂ.ಸಾಗರ, ಮಹ್ಮದ್​ ಇಸ್ಮಾಯಿಲ್​ ತಿಮ್ಮಾಪುರ, ಡಾ.ಸಂಗಣ್ಣ ಗೋಗಿ, ಭೀಮರಾಯ ಪೂಜಾರ, ಸಂಗಣ್ಣ ಹೊಸಮನಿ, ಹನಮಂತರೆಡ್ಡಿ ಮೇಟಿ, ರುದ್ರಗೌಡ ರ್ಶನಾಪುರ, ಮಲ್ಲಿಕಾರ್ಜುನ, ಶಾಂತಗೌಡ, ಸೂಗೂರೇಶ ಹೇರುಂಡಿ, ಶಶಿಧರರಡ್ಡಿ, ರಸೀದಾ ಬೇಗಂ, ಹಸೀನಾಬೇಗಂ, ಪರೀದಾಬೇಗಂ, ಚಂದ್ರಾವತಿ ಇತರರಿದ್ದರು.