Demand to stop the bus at the station
ಕೊರಟಗೆರೆ: ಪಟ್ಟಣದ ಮಧ್ಯೆ ಬಸ್‌ನಿಲ್ದಾಣದಲ್ಲಿ ಬಸ್‌ಗಳು ನಿಲ್ಲಿಸದೇ ಸಾಗುತ್ತಿರುವ ಆರೋಪದ ಹಿನ್ನೆಲೆ ಬುಧವಾರ ಬೆಳಗ್ಗೆ ಸಾರ್ವಜನಿಕರು ಬಸ್ ತಡೆದು ಪ್ರತಿಭಟಿಸಿದರು.
ಬಸ್ ತಡೆದ ಪರಿಣಾಮ ಮಧ್ಯ ಬಸ್‌ಸ್ಟಾಂಡ್ ಪ್ರದೇಶದಲ್ಲಿ ವಾಹನಗಳ ಸಾಲು ಉಂಟಾಗಿ ವ್ಯಾಪಾರಸ್ಥರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲೇ ಈ ಟನೆ ನಡೆದಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಪ್ರ್ರತಿಭಟನಾಕಾರರೊಂದಿಗೆ ಸವಾಲೋಚನೆ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ, ಶಾಂತಿಯುತವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ವಿದ್ಯಾರ್ಥಿನಿ ಕೋಮಲಾ ಮಾತನಾಡಿ, ಪರೀಕ್ಷೆ ಮತ್ತು ಕಾಲೇಜಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬಸ್ ನಿಲ್ಲಿಸದೇ ಹೋದರೆ ಅರ್ಧ ಗಂಟೆಗೂ ಹೆಚ್ಚು ಕಾಯಬೇಕಾಗುತ್ತದೆ ಎಂದು ಅಸವಾಧಾನ ವ್ಯಕ್ತಪಡಿಸಿದರು.
ಮುಖಂಡ ನಟರಾಜು ವಾತನಾಡಿ, ಪಟ್ಟಣದ ಪ್ರತಿ ಬಸ್ ನಿಲ್ದಾನದಲ್ಲಿ ಕಡ್ಡಾಯವಾಗಿ ನಿಲ್ಲಿಸಬೇಕು. ಮಧ್ಯ ಬಸ್‌ಸ್ಟಾಂಡ್ ಅನ್ನು ಬಿಟ್ಟು ಹೋಗುವುದು ಸರಿಯಲ್ಲ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು.