ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆನೇಕಲ್ ತಾಲೂಕು ಕಚೇರಿ ಮುಂದೆ ಭಾರತೀಯ ಮಜ್ದೂರ್ ಸಂದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಸಂದ ರಾಜ್ಯ ಉಪಾಧ್ಯ ಎಚ್.ಎಂ.ವೆಂಕಟೇಶ್, ಜಿಲ್ಲಾ ಅಧ್ಯ ಸುಬ್ರಮಣಿ ಮತ್ತು ವಿವಿಧ ಕಾರ್ಖಾನೆಗಳ ನೌಕರರು ಇದ್ದರು.
ಆನೇಕಲ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಮಜ್ದೂರ್ಸಂದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾರತೀಯ ಮಜ್ದೂರ್ ಸಂದ ರಾಜ್ಯ ಉಪಾಧ್ಯ ಎಚ್.ಎಂ.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜೀವನ ನಡೆಸುವುದೇ ಕಷ್ಟವಾಗಿದೆ. ಮಾಸಿಕ ವೇತನ ಹೆಚ್ಚಳಗೊಳಿಸದಿದ್ದರೆ, ಅವರ ಪರಿಸ್ಥಿತಿ ಕಷ್ಟವಾಗುತ್ತದೆ. ಹಾಗಾಗಿ ಮಾಸಿಕ ವೇತನ ಹೆಚ್ಚಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಎಸ್ಆರ್ಟಿಸಿ ನೌಕರರ 38 ತಿಂಗಳ ಹೆಚ್ಚುವರಿ ಬಾಕಿ ವೇತನವನ್ನು ತಣ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಂದ ರಾಜ್ಯ ಟಕದ ಅಧ್ಯ ಎನ್.ಕೆ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಭ್ರಷ್ಟಾಚಾರ ತೀವ್ರವಾಗಿದ್ದು, ಈ ಕುರಿತಂತೆ ನ್ಯಾಯಾಂಗ ತನಿಖೆಯಾಗಬೇಕು. ಕಾರ್ಮಿಕರ ಹಿತ ಕಾಯುವವರು ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂದರು.
ಇಪಿಎಫ್ ಪಿಂಚಣಿಯನ್ನು ಒಂದು ಸಾವಿರದಿಂದ ಏಳೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಇಎಸ್ಐ ಮಿತಿಯನ್ನು ಇಪಿಎಫ್ ವಂತಿಗೆಯ ಮಿತಿ ಹೆಚ್ಚಿಸಬೇಕು. ಪಿಂಚಣಿಯಲ್ಲಿ ಎಲ್ಲ ವಿಭಾಗದ ಕಾರ್ಮಿಕರಿಗೂ ಜಾರಿಗೊಳಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟದ ಕಾರ್ಮಿಕರ ಮಾಸಿಕ ಗೌರವಧನ ಹೆಚ್ಚಿಸಬೇಕು. ಬ್ಯಾಂಕಿಂಗ್ ಉದ್ಯಮವನ್ನು ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೊಳಿಸಬೇಕು. ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾರ್ಮಿಕ ಪದ್ಧತಿ ಕೈಬಿಡಬೇಕು. ಕಾರ್ಮಿಕ ಕಾಯ್ದೆ ಜಾರಿಗೊಳಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಶಶಿಧರ್ ಮಾಡ್ಯಾಳ್ ಅವರಿಗೆ ಮನವಿ ಸಲ್ಲಿಸಿದರು.