Demand to establish ration sub-centre 
ರಾಜ್ಯ

ಪಡಿತರ ಉಪ ಕೇಂದ್ರ ಸ್ಥಾಪಿಸಲು ಪಟ್ಟು

ತುಮಕೂರು ಡೆಸ್ಕ್
ವಿಜಯವಾಣಿ ಸುದ್ದಿಜಾಲ ಹುಳಿಯಾರು
ಹೋಬಳಿ ಸಿಂಗಾಪುರ ಗ್ರಾಮದಲ್ಲಿ ಪಡಿತರ ವಿತರಣಾ ಉಪ ಕೇಂದ್ರವನ್ನು ಸ್ಥಾಪಿಸುವ ಮೂಲಕ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು ಸಾಮಾಜಿಕ ಕಾರ್ಯಕರ್ತರು ಜಿಲ್ಲಾ ಆಹಾರ ಇಲಾಖೆಗೆ ಮನವಿ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಸಿಂಗಾಪುರ ಗ್ರಾಮದ ನಿವಾಸಿಗಳು ಪಡಿತರ ಅಕ್ಕಿ ಪಡೆಯಲು ಯಳನಾಡು ಗ್ರಾಮಕ್ಕೆ ಹೋಗಬೇಕು. ಈ ದೂರದ ಪ್ರಯಾಣದಿಂದಾಗಿ, ವಿಶೇಷವಾಗಿ ಗ್ರಾಮದ ವಯೋವೃದ್ಧರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಪ್ರತಿ ತಿಂಗಳು ಪಡಿತರ ಪಡೆಯಲು ಅನುಭವಿಸುವ ಕಷ್ಟವನ್ನು ತಪ್ಪಿಸಲು ಗ್ರಾಮದಲ್ಲೇ ಉಪಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸಿ ತುಮಕೂರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ್​ ಅವರಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಜಂಟಿ ನಿರ್ದೇಶಕ ಬಸವರಾಜ್​, ಸಿಂಗಾಪುರ ಗ್ರಾಮದಲ್ಲಿ ಅತಿ ತುರ್ತಾಗಿ ಪಡಿತರ ವಿತರಣಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
25 ಹುಳಿಯಾರು 01
ಹುಳಿಯಾರು ಹೋಬಳಿ ಸಿಂಗಾಪುರ ಗ್ರಾಮದಲ್ಲಿ ಪಡಿತರ ವಿತರಣಾ ಉಪ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾ ಆಹಾರ ಇಲಾಖೆಗೆ ಮನವಿ ಸಲ್ಲಿಸಿದರು. ಸಾಮಾಜಿಕ ಹೋರಾಟಗಾರ ಶ್ರೀನಿವಾಸ್​ ಸಬ್ಬೇನಹಳ್ಳಿ, ಯಳನಾಡು ರೇವಣಸಿದ್ದೇಶ್ವರ ಮಠದ ಅಧ್ಯಕ್ಷ ದೇವಿಪ್ರಸಾದ್​, ವಿವಿಧ ಮಹಿಳಾ ಸಂಘದ ಸದಸ್ಯರಾದ ಪಾರ್ವತಮ್ಮ, ಚಂದ್ರಮ್ಮ, ರಾಧಮ್ಮ, ವಿಮಲಮ್ಮ ಮತ್ತು ವರದಿಗಾರ ಎಸ್​.ಎಲ್​.ಲೋಕೇಶ್​ ಇದ್ದರು.