ಸಾರಿಗೆ ಬಸ್​ ಘಟಕ ಸ್ಥಾಪಿಸಲು ಒತ್ತಾಯಿಸಿ ಕರೆದಿದ್ದ ಬಂದ್​ನಲ್ಲಿ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.  
ರಾಜ್ಯ

ಗುಡಿಬಂಡೆಯಲ್ಲಿ ಬಸ್​ ಘಟಕ ಸ್ಥಾಪಿಸುವಂತೆ ಪಟ್ಟು

ಗುಡಿಬಂಡೆ :

ಸಾರಿಗೆ ಬಸ್​ ಡಿಪೋ ಸ್ಥಾಪಿಸುವಂತೆ ಮತ್ತು ಸೂಕ್ತ ಬಸ್​ ವ್ಯವಸ್ಥೆಗೆ ಆಗ್ರಹಿಸಿ ತಾಲೂಕು ಸಾರಿಗೆ ಘಟಕ ಸ್ಥಾಪನ ಹೊರಾಟ ಸಮಿತಿಯಿಂದ ಗುಡಿಬಂಡೆ ಬಂದ್​ಗೆ ಕರೆ ನೀಡಿದ್ದು, ಬಂದ್​ಗೆ ಬೆಂಬಲ ವ್ಯಕ್ತವಾಯಿತು.

ಹೊರಟ ಸಮಿತಿ ಅಧ್ಯಕ್ಷ ಜಿ.ವಿ.ಗಂಗಪ್ಪ ಮಾತನಾಡಿ, ತಾಲೂಕಿನಲ್ಲಿ ಸಾರಿಗೆ ಘಟಕ ಮಾಡಬೇಕೆಂದು ದಶಕಗಳ ಹಿಂದೆ ಕಂದಾಯ ಇಲಾಖೆಯಿಂದ 10 ಎಕರೆ ಜಮೀನು ಸಾರಿಗೆ ಇಲಾಖೆೆಗೆ ಮಂಜೂರು ಮಾಡಿದ್ದರು. ಇದುವರೆಗೂ ಬಸ್​ ಘಟಕ ನಿರ್ಮಿಸಿಲ್ಲ, ಇಲಾಖೆಯಿಂದ ಘಟಕ ಸ್ಥಾಪನೆ ಮಾಡಲು ಆಗದಿದ್ದರೆ ಮಂಜೂರು ಮಾಡಿರುವ ಜಮೀನು ಮತ್ತೆ ಕಂದಾಯ ಇಲಾಖೆಗೆ ವಾಪಸ್​ ನೀಡಿ.
ತಾಲೂಕಿಗೆ ಸೂಕ್ತ ಬಸ್​ ವ್ಯವಸ್ಥೆಯಿಲ್ಲದೇ ಪ್ರತಿದಿನ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರಿಯಾದ ವ್ಯವಸ್ಥೆ ಮಾಡುವುದಾದರೆ ಮಾತ್ರ ಬಸ್​ಗಳನ್ನು ಕಳುಹಿಸಿ, ಇಲ್ಲವಾದರೆ ನಮ್ಮ ತಾಲೂಕಿಗೆ ಬಸ್​ಗಳನ್ನು ಕಳುಹಿಸಬೇಡಿ, ನಾವು ಖಾಸಗಿ ಬಸ್​ಗಳ ಮೂಲಕ ಸಂಚಾರ ಮಾಡುತ್ತೆವೆಂದು ಆಕ್ರೋಶ ಹೊರಹಾಕಿದರು.
ತಾಲೂಕು ಕಸಾಪ ಅಧ್ಯಕ್ಷ ಬಿ.ಮಂಜುನಾಥ್​ ಮಾತನಾಡಿ, ನಮ್ಮ ತಾಲೂಕುಗಳಿಗೆ ಸಮಯಕ್ಕೆ ಸರಿಯಾಗಿ ಬಸ್​ಗಳು ಬರುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳು ಶಾಲಾ&ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಇನ್ನು ತಾಲೂಕಿನಿಂದ ಎಲ್ಲೋಡು ಹಾಗೂ ಸೊಮೇನಹಳ್ಳಿಗಳಿಗೆ ಸರ್ಕಾರಿ ಬಸ್​ ಇಲ್ಲದೇ ಇರುವುದರಿಂದ ಗುಡಿಬಂಡೆ ಪಟ್ಟಣದ ಕಾಲೇಜುಗಳಿಗೆ ದಾಖಲಾತಿಗಳು ಇಲ್ಲದಂತಾಗಿದೆ.
ಅನೇಕ ಭಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗುತ್ತಿಲ್ಲ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ನಮ್ಮ ತಾಲೂಕು ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ಸಾರಿಗೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಸಾರಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ತಾತ್ಕಾಲಿಕ ಘಟಕ ಸ್ಥಾಪಿಸಿ ಎಲ್ಲ ಬಸ್​ಗಳನ್ನು ನಿರ್ವಹಣೆ ಮಾಡಿ ಎಂದು ಪ್ರತಿಭಟನಕಾರರು ಮನವಿ ಮಾಡಿದ್ದು, ತಾತ್ಕಾಲಿಕ ಘಟಕ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಅದನ್ನು ಒಪ್ಪದ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಿದರು.
ಸಾರಿಗೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಲಕ್ಷಿ$್ಮಪತಿ, ಅಮೀರ್​ ಜಾನ್​, ಶ್ರೀನಿವಾಸ್​ ಯಾದವ್​, ಅಂಬರೀಶ್​, ವಿಕಾಸ್​, ಅಮರೇಶ, ವಾಹಿನಿ ಸುರೇಶ್​ ಇದ್ದರು.