ತಾಳಿಕೋಟೆಯ ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ನಡೆದ ರವಿಚಂದ್ರ ದೇವಪ್ಪ ಮಾದರ ಅವರ ಕೊಲೆ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ವಿವಿಧ ಸಂಘಟನೆಗಳಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರಮೇಶ ದೊಡಮನಿ, ಬಾಲಚಂದ್ರ ಹುಲ್ಲೂರು, ಗೋಪಾಲ ಕಟ್ಟಿಮನಿ ಮತ್ತಿತರರಿದ್ದರು. 
ರಾಜ್ಯ

ಕೊಲೆ ಹಂತಕರನ್ನು ಬಂಧಿಸಲು ಒತ್ತಾಯ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಸೇನೆ ವತಿಯಿಂದ ಬೃಹತ್ ಪ್ರತಿಭಟನೆ
  • ನ್ಯಾಯಕ್ಕಾಗಿ ಬೇಡಿಕೆ
ತಾಳಿಕೋಟೆ: ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ನಡೆದ ರವಿಚಂದ್ರ ದೇವಪ್ಪ ಮಾದರ ಅವರ ಕೊಲೆ ಮಾಡಿದ ಹಂತಕರನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಸಂಘಟನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮುಖಂಡ ಬಸವರಾಜ ಸಿದ್ದಾಪುರ ಮಾತನಾಡಿ, ಪೊಲೀಸ್ ಇಲಾಖೆ ಕೊಲೆಗೈದ ಹಂತಕರನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಕಟ್ಟಿಮನಿ ಮಾತನಾಡಿ, ಮಾದರ ಚೆನ್ನಯ್ಯ ಸಮಾಜದ ರವಿಚಂದ್ರ ಮಾದರ ಎಂಬ ಯುವಕನನ್ನು ಪ್ರಭಾವಿಗಳು ಕೊಲೆಗೈದಿದ್ದಾರೆ. ಈ ವಿಷಯ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರನ್ನು ಬಂಧಿಸಲು ಹಿಂದೇಟು ಹಾಕುತ್ತಿರುವುದು ಅನುಮಾನ ಮೂಡಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಕಾನೂನು ಎಂಬಂತಾಗಿರುವುದು ದುರ್ದೈವ ಸಂಗತಿ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸದಿದ್ದರೆ ಸಂಘಟನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಬಣದ ತಾಲೂಕು ಅಧ್ಯಕ್ಷ ರಮೇಶ ದೊಡಮನಿ (ಸಾಸನೂರ), ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರು, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ್ ಕಟ್ಟಿಮನಿ, ಅಂಬೇಡ್ಕರ್ ಸೇನೆ ತಾಲೂಕು ಕಾರ್ಯದರ್ಶಿ ಮಾದೇವ ಚಟ್ನಳ್ಳಿ ಮಾತನಾಡಿದರು.
ಪ್ರತಿಭಟನೆ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ, ಕತ್ರಿ ಬಜಾರ್, ಶಿವಾಜಿ ಮಹಾರಾಜ ಸರ್ಕಲ್, ಬಸ್‌ಸ್ಟಾೃಂಡ್ ರಸ್ತೆ ಮೂಲಕ ಸಂಚರಿಸಿ, ಅಂತಿಮವಾಗಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್. ಕಾದ್ರೊಳ್ಳಿ ಬಣದ ತಾಲೂಕು ಕಾರ್ಯದರ್ಶಿ ಶಂಕ್ರಪ್ಪ ದೊಡ್ಮನಿ, ರಮೇಶ ಮಾದರ, ರಮೇಶ ದೊಡಮನಿ, ಕಾಳಪ್ಪ ಮಾದರ, ದೇವಪ್ಪ ಮಾದರ ತುಂಬಗಿ, ಶೇಖಪ್ಪ ಚಬನೂರ, ರಾಮಪ್ಪ ಕಟ್ಟಿಮನಿ, ಸುಭಾಸ ಗುಂಡಕನಾಳ, ಮಾದೇವ ನಾಗೂರ, ಯಮನಪ್ಪ ಕಟ್ಟಿಮನಿ, ಹುಲಗಪ್ಪ ಕಟ್ಟಿಮನಿ, ಮರಿಯಪ್ಪ ಚಲವಾದಿ ಮತ್ತಿತರರಿದ್ದರು.