- ಪಿಯು ಶಿಕ್ಷಕರಿಗೆ ಹೈಸ್ಕೂಲ್ ಮಕ್ಕಳ ಪಾಠದ ಹೊಣೆ
ಕಲಬುರಗಿ: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ದೀರ್ಕಾಲದಿಂದ ಕಾಡುತ್ತಿರುವ ಶಿಕರ ಕೊರತೆ ನೀಗಿಸಬೇಕೆಂಬ ಒಂದೇ ಕಾರಣ, ಶಿಕ್ಷಣ ಇಲಾಖೆಯ ಸಚಿವರು ಇಲ್ಲದಿರುವ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಹೆಚ್ಚುವರಿ ಹೊಣೆ ನೀಡಲು ಮುಂದಾಗಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪದವಿಪೂರ್ವ ಕಾಲೇಜು ಉಪನ್ಯಾಸಕರು 9, 10ನೇ ತರಗತಿಗಳಿಗೆ ಕಡ್ಡಾಯವಾಗಿ ಬೋಧನೆ ಮಾಡಬೇಕೆಂದು ಸರ್ಕಾರ ತುರ್ತಾಗಿ ವಿಶೇಷ ರಾಜ್ಯಪತ್ರ ಹೊರಡಿಸಿದೆ. ಇದರಿಂದಾಗಿ ನೇರ ನೇಮಕಾತಿ ಹಾಗೂ ಬಡ್ತಿ ಹೊಂದಿದ ಸಾವಿರಾರು ಉಪನ್ಯಾಸಕರಿಗೆ ದೊಡ್ಡ ಆಘಾತ ನೀಡಿದೆ ಎಂದಿದ್ದಾರೆ.
ಕರ್ನಾಟಕ ಸಾಮಾನ್ಯ ಸೇವೆಗಳು ಪದವಿಪೂರ್ವ ಶಿಕ್ಷಣ ಇಲಾಖೆ ವೃಂದ ನೇಮಕಾತಿ ನಿಯಮ 2013ಕ್ಕೆ ತಿದ್ದುಪಡಿ ತರುವುದರ ಮೂಲಕ ಸರ್ಕಾರ ನಿಗದಿಪಡಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯು ಉಪನ್ಯಾಸಕರು ಪ್ರೌಢಶಾಲಾ ಹಂತದ ವಿದ್ಯರ್ಥಿಗಳಿಗೆ ಪಾಠ ಮಾಡಬೇಕಾಗುತ್ತದೆ. ಆದರೆ ಹಳೆಯ ನಿಯಮಾವಳಿಗಳ ಪ್ರಕಾರ ಪಿಯು ಉಪನ್ಯಾಸಕರಿಗೆ ಕೇವಲ ಪ್ರಥಮ ಹಾಗೂ ದ್ವೀತಿಯ ತರಗತಿಗಳಿಗೆ ಮಾತ್ರ ಬೋಧಿಸುವ ಹಕ್ಕು ಮತ್ತು ಜವಾಬ್ದಾರಿ ಇತ್ತು. ಈಗಿನ ತಿದ್ದುಪಡಿಯಿಂದಾಗಿ ಹೈಸ್ಕೂಲ್ ಹಂತಕ್ಕೂ ಇವರ ಸೇವೆ ವಿಸ್ತರಣೆಯಾಗಲಿದೆ. ಈ ನಿಯಮ ಜಾರಿಯಾದರೆ ಈಗಾಗಲೇ ಪ್ರೌಢಶಾಲೆಗಳಿಗೆ ನೇಮಕವಾದ ಶಿಕ್ಷಕರಿಗೂ ಕೆಲಸ ಕೈ ತಪ್ಪಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು 9 ಹಾಗೂ 10 ನೇ ತರಗತಿಗೆ ಬೋಧನೆ ಮಾಡಿದರೆ ಶೈಕ್ಷಣಿಕ ಹಂತಗಳ ವೈಾನಿಕ ವಿನ್ಯಾಸಕ್ಕೆ ಧಕ್ಕೆಯುಂಟಾಗಲಿದೆ. ಪದವಿಪೂರ್ವ ಉಪನ್ಯಾಸಕರು ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಕೋರ್ಸ್ ವಿದ್ಯಾರ್ಹತೆ ಹೊಂದಿದ್ದು, ಗೆಜೆಟೆಡ್-ಬಿ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೌಢಶಾಲಾ ಶಿಕ್ಷಕರು ಪದವಿ ಮತ್ತು ಬಿ.ಇಡಿ ಆಧಾರದಲ್ಲಿ ಗ್ರೂಪ್-ಸಿ ಹುದ್ದೆಯಲ್ಲಿದ್ದಾರೆ. ಈ ಎರಡು ಹುದ್ದೆಗಳ ನೇಮಕಾತಿ, ವೇತನ ಶ್ರೇಣಿ ಹಾಗೂ ಆಡಳಿತಾತ್ಮಕ ಹಕ್ಕುಗಳಲ್ಲಿ ವ್ಯತ್ಯಾಸಗಳಿದ್ದು, ಇದು ಉಪನ್ಯಾಸಕರ ವೃತ್ತೀಜಿವನದ ಗೌರವಕ್ಕೆ ಧಕ್ಕೆ ತರಲಿದೆ.
ಈಗಾಗಲೇ 16 ಗಂಟೆ ಇದ್ದ ಕಾರ್ಯಭಾರದ ಅವಧಿಯನ್ನು 20 ಗಂಟೆಗೆ ಹೆಚ್ಚಿಸಲಾಗಿದೆ. ಈಗ 9 ಹಾಗೂ 10ನೇ ತರಗತಿಗೆ ಬೋಧನೆ ಮತ್ತಷ್ಟು ಹೊರೆಯಾಗಲಿದೆ. ಇಂತಹ ಅವೈಜ್ಞಾನಿಕ ರಾಜ್ಯ ಪತ್ರ ಹೊರಡಿಸಿ 7 ದಿನಗಳಲ್ಲಿ ಆೇಪಣೆ ಸಲ್ಲಿಸಲೂ ಸೂಚಿಸಿದೆ.
ಹೀಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾರತಾ ಇಲಾಖೆ ತಿದ್ದುಪಡಿ ಕೂಡಲೇ ರದ್ದುಪಡಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮುಂದಿನ ಹೋರಾಟಗಳಿಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
"
ಈ ವಿಶೇಷ ರಾಜ್ಯಪತ್ರ ಹೊರಡಿಸುವಾಗ ಸರ್ಕಾರ ಶಿಕ್ಷಣ ತರ ಸಲಹೆ ಪಡೆಯಬೇಕಾಗಿತ್ತು. ಶಿಕ್ಷರ ಕ್ಷೇತ್ರದ, ಪದವಿಧರ ಕ್ಷೇತ್ರದ ಶಾಸಕರು, ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಬೇಕಾಗಿತ್ತು. ಯಾವುದೆ ಸಲಹೆ, ಸೂಚನೆ ಇಲ್ಲದೆ ಏಕಾಏಕಿ ರ್ನಿಣಯ ತೆಗೆದುಕೊಳ್ಳುವುದು ಸಮಂಜಸವಲ್ಲ.
— ಶಶೀಲ್ ನಮೋಶಿ, ವಿಧಾನ ಪರಿಷತ್ ಸದಸ್ಯ.