ವಿವಿಧ ಗ್ರಾಮದ ಗ್ರಾಮಸ್ಥರು ಮಂಗಳವಾರ ಹಳೇ ಬೆಳಗಾವಿ ನಾಕಾದಿಂದ ಅಲಾರವಾಡ ಅಂಡರ್‌ಬ್ರಿಡ್ಜ್‌ವರೆಗಿನ ರಸ್ತೆ ದುರಸ್ತಿಗೆ ಒತ್ತಾಯಿಸಿದರು. ಅಣ್ಣಾಸಾಹೇಬ ೋರ್ಪಡೆ, ಸಾಗರ ಕಮನಾಚೆ, ಕಿಶೋರ ಚೌಗಲೆ, ಮಹೇಂದ್ರ ಕಾಂಬಳೆ, ಮಹೇಶ ಕಡೋಲ್ಕರ ಇತರರಿದ್ದರು. 
ರಾಜ್ಯ

ಹಳೇ ಪಿಬಿ ರಸ್ತೆ ದುರಸ್ತಿಗೆ ಒತ್ತಾಯ

ಬೆಳಗಾವಿ:

ಹಳೇ ಬೆಳಗಾವಿ ನಾಕಾದಿಂದ ಅಲಾರವಾಡ ಅಂಡರ್‌ಬ್ರಿಡ್ಜ್ ವರೆಗಿನ ಹಳೇ ಪಿಬಿ ರಸ್ತೆಯಲ್ಲಿ ತಗ್ಗು -ಗುಂಡಿಗಳು ನಿರ್ಮಾಣವಾಗಿದ್ದು, ಕೂಡಲೇ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಹಲಗಾ, ಅಲಾರವಾಡ ಸೇರಿದಂತೆ ವಿವಿಧ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಲಗಾ, ಅಲಾರವಾಡ, ಬಸ್ತವಾಡ, ಕೊಂಡಸಕೊಪ್ಪ, ಮಾಸ್ತಮರಡಿ, ತಾರಿಹಾಳ, ಶಗಣಮಟ್ಟಿ, ಶಿಂದೋಳಿ ಹಾಗೂ ಬಸರಿಕಟ್ಟಿ ಗ್ರಾಮಗಳ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿನಿತ್ಯ ಬೆಳಗಾವಿ, ವಡಗಾವಿ ಸೇರಿದಂತೆ ವಿವಿಧೆಡೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ, ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.
ಹಳೇ ಪಿಬಿ ರಸ್ತೆ (ಯಡಿಯೂರಪ್ಪ ಮಾರ್ಗ)ಯಲ್ಲಿರುವ ಗುಂಡಿಗಳನ್ನು ತಕ್ಷಣ ಮುಚ್ಚಿಸಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಣ್ಣಾಸಾಹೇಬ ೋರ್ಪಡೆ, ಸಾಗರ ಕಮನಾಚೆ, ಕಿಶೋರ ಚೌಗಲೆ, ಮಹೇಂದ್ರ ಕಾಂಬಳೆ, ಮಹೇಶ ಕಡೋಲ್ಕರ ಇತರರಿದ್ದರು.