ಅಂಗವಿಕಲರ ಪಿಂಚಣಿ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಹುಣಸಗಿಯಲ್ಲಿ ಶುಕ್ರವಾರ ರಾಜ್ಯ ಅಂಗವಿಕಲರ ಹಕ್ಕುಗಳ ಒಕ್ಕೂಟದಿಂದ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ನಿಂಗಪ್ಪ ಕಟ್ಟಿಮನಿ, ಸಂಗನಗೌಡ ಧನರೆಡ್ಡಿ, ಸಾಹೇಬಗೌಡ ಬಿರಾದಾರ ಇತರರಿದ್ದರು.
- ಹುಣಸಗಿಯಲ್ಲಿ ಅಂಗವಿಕಲ ಹಕ್ಕುಗಳ ಒಕ್ಕೂಟದಿಂದ ತಹಸೀಲ್ದಾರ್ಗೆ ಮನವಿ
ಹುಣಸಗಿ: ಅಂಗವಿಕಲರ ಬದುಕಿಗೆ ಆಸರೆಯಾಗಿರುವ ಪಿಂಚಣಿಯನ್ನು ಶ್ರೀ ಬಿಡುಗಡೆ ಮಾಡಬೇಕು ಎಂದು ರಾಜ್ಯ ಅಂಗವಿಕಲರ ಹಕ್ಕುಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಒತ್ತಾಯಿಸಿದರು.
ಈ ಕುರಿತು ಶುಕ್ರವಾರ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಅಂಗವಿಕಲರ ಮಾಶಾಸನ (ಪಿಂಚಣಿ) ಸ್ಥಗಿತಗೊಂಡಿರುವುದರಿಂದ ಅನೇಕ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಜೀವನ ನಿರ್ವಹಣೆಗೆ ಈ ಪಿಂಚಣಿಯನ್ನೇ ಅವಲಂಬಿಸಿರುವ ಅಂಗವಿಕಲರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಪರದಾಡುವಂತಾಗಿದೆ ಎಂದು ನೋವು ತೋಡಿಕೊಂಡರು.
ತಾಲೂಕು ಗೌರವಾಧ್ಯಕ್ಷ ಸಾಹೇಬಗೌಡ ಬಿರೇದಾರ, ಕಾರ್ಯದರ್ಶಿ ರಾಜಶೇಖರ ಖಾನಾಪುರ, ಮಲ್ಲಿಕಾರ್ಜುನ್ ಕುಂಬಾರ, ಹುಣಸಗಿ ತಾಲೂಕಿನ ವಿಆರ್ಡಬ್ಲ ವಿಭಾಗದ ಅಧ್ಯಕ್ಷ ಸಂಗನಗೌಡ ಧನರಡ್ಡಿ, ಸಿದ್ದಪ್ಪ ಕಲ್ಲೂರ, ಮಾಹಾಂತೇಶ ಕನ್ನಳ್ಳಿಮಠ, ಗುರು ಗುತ್ತೇದಾರ್, ಮೈಹಿಬೂಬ್ ದಪೇದಾರ, ಮಾನಪ್ಪ ಗೆದ್ದಲಮರಿ, ಮೈಬೂಬಸಾಬ್ ಚನ್ನೂರ, ಹಣಮಾ ಬೈಚಬಾಳ, ಗದ್ದೆಪ್ಪ ಹುಡೆದ, ರಾಜು ಚನ್ನೂರ, ಬಸವರಾಜ ನಾರಾಯಣಪುರ, ಹಣಮಂತ್ರಾಯ ಮಾರನಾಳ, ಮಾಳಪ್ಪ ಅಗ್ನಿ, ಬಸವರಾಜ ಕಕ್ಕೇರಿ ಇತರರಿದ್ದರು.