ದೇವರಹಿಪ್ಪರಗಿ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಅಂಗವಿಕಲರ ಪಿಂಚಣಿ ಮರು ಚಾಲನೆಗೆ ಆಗ್ರಹಿಸಿ ಅಂಕವಿಕಲರ ಸಂಘಟನೆ ಒಕ್ಕೂಟದಿಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದರು. ಮುತ್ತುರಾಜ ಸಾತಿಹಾಳ, ಪರಶುರಾಮ ಯಲಗೋಡ, ಸಂಗಪ್ಪ ಸುರಗಿಹಳ್ಳಿ, ಶರಣಗೌಡ ಪಾಟೀಲ, ದ್ಯಾವಪ್ಪ ಪೂಜಾರಿ, ಮೈನುದ್ದಿನ ಮುಜಾವರ, ಚೈತ್ರಾ ನಾವಿ ಇತರರಿದ್ದರು.
- ಅಂಕವಿಕಲರ ಸಂಘಟನೆ ಒಕ್ಕೂಟದಿಂದ ಆಗ್ರಹ
- ಮುಖ್ಯಮಂತ್ರಿಗಳಿಗೆ ಮನವಿ
ದೇವರಹಿಪ್ಪರಗಿ: ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿರುವ ಅರ್ಹ ಅಂಗವಿಕಲರ ಮಾಸಾಶನವನ್ನು (ಪಿಂಚಣಿ) ತಕ್ಷಣವೇ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ವಿವಿಧ ಅಂಕವಿಕಲರ ಸಂಘಟನೆ ಒಕ್ಕೂಟದ ಪದಾಧಿಕಾರಿಗಳ ವತಿಯಿಂದ ಶುಕ್ರವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮಾತನಾಡಿ, ಅರ್ಹ ಅಂಗವಿಕಲರು ಪಿಂಚಣಿ ಮರು ಚಾಲನೆಗೆ ಅಗತ್ಯವಿರುವ ಪೂರಕ ದಾಖಲಾತಿಗಳನ್ನು ಒದಗಿಸಿದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಆರ್‌ಡಬ್ಲುೃ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ರದ್ದಾಗಿರುವ ಅರ್ಹ ಅಂಕವಿಕಲರ ಪಿಂಚಣಿ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನೇರವಾಗಿ ಕಚೇರಿಗೆ ಸಲ್ಲಿಸಬೇಕು. ಇದರಿಂದಾಗಿ ಅಂಗವಿಕಲರು ಅನಾವಶ್ಯಕವಾಗಿ ತಹಸೀಲ್ದಾರ್ ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದು ತಿಳಿಸಿದರು.
ಅಂಗವಿಕಲರ ಕುಂದು ಕೊರತೆಗಳನ್ನು ಆಲಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ತಾಲೂಕು ಮಟ್ಟದ ವಿಶೇಷ ಸಭೆ ಕರೆಯಲಾಗುವುದು ಎಂದರು.
ಬಸಮ್ಮ ಘಂಟೆ, ಪ್ರಕಾಶ ಪವಾರ, ಪರಮಾನಂದ ಹಡಪದ, ಬಸಪ್ಪ ಯತ್ನಾಳ, ಅಶೋಕ್ ಕೋಟಿನ, ಮಡಿವಾಳಪ್ಪ ಒಂಟೆತ್ತಿನ, ಲಕ್ಷ್ಮಣ ಪೂಜಾರಿ, ಹಸಿಮಸಾಬ್ ಹಾದಿಮನಿ ಇತರರಿದ್ದರು.