ಶಿವಕುಮಾರ ಮ್ಯಾಗಳಮನಿ 
ರಾಜ್ಯ

ಬಾಕಿ ವೇತನ ಪಾವತಿಗೆ ಒತ್ತಾಯ

ರಾಯಚೂರು ನಗರದ ಯರಮರಸ್ ಹತ್ತಿರದ ನೂಲಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು 550 ಕಾರ್ಮಿಕರಿಗೆ ಯಾವುದೇ ಬಾಕಿವೇತನ,ಭತ್ಯೆಗಳನ್ನು ನೀಡದೇ ವಂಚಿ ಸಲಾಗಿದ್ದು ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಹರಾಜು ಮಾಡಿ ಅನ್ಯಾಯ ಮಾಡಲಾಗಿದೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ ಮ್ಯಾಗಳಮನಿ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, ಸರ್ಕಾರಿ ಜಮೀನಲ್ಲಿದ್ದ ಸಹಕಾರಿ ನೂಲಿನ ಗಿರಣಿಯನು 1997ರಲ್ಲಿ ಮುಚ್ಚಲಾಗಿದೆ. ಆದರೆ ನೂಲಿ ಗಿರಿಣಿ ಮಾಲೀಕತ್ವ ಇಲ್ಲದೇ ಇದ್ದರೂ ಸಹಕಾರಿ ಇಲಾಖೆ ಅಧಿಕಾರಿಗಳು ಭೂಮಿಯನ್ನು ಖಾಸಗಿಯವರಿಗೆ ನೀಡಲಾಗಿದೆ. 40 ಎಕರೆ 25 ಗುಂಟೆ ಭೂಮಿಯೂ ಸಹ ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ.
ಸರ್ಕಾರಿ ಜಮೀನನ್ನು ಬಸಂತ ಟೆಕ್ಸಟೆಲ್ ಕಂಪನಿ, ಮರ‌್ಸೆಂಟೈಲ್ ಹಾಗೂ ಮೋಹಿನಿ ಇನ್ ಫ್ರಾ ಕಂಪನಿಗೆ ಹರಾಜು ಮಾಡಲಾಗಿದೆ. 2011 ರಲ್ಲಿ ಸಹಾಯಕ ಆಯುಕ್ತರು ಕರ್ನಾಟಕ ಸರ್ಕಾರ ಜಮೀನು ಎಂದು ನಮೂದಿಸಿದ್ದರು. 2017-18 ರಲ್ಲಿ ದೀಪಕ್ ಇನ್ನಾಣಿ ಹೆಸರನ್ನು ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ ಕಾರ್ಮಿಕರಿಗೆ ಬಾಕಿ ವೇತನ, ಗ್ರಾಚ್ಯುಟಿ, ಪಿಎಫ್ ಹಣ ಇಂದಿಗೂ ಪಾವತಿಸಿಲ್ಲ. 550 ಕಾರ್ಮಿಕರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು ಮದ್ಯಪ್ರವೇಶಿಸಿ ಇತ್ಯರ್ಥಪಡಿಸಬೇಕು. ಇಲ್ಲದೇ ಹೋದಲ್ಲಿ ತೀವ್ರಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ಇ.ನಸದುಲ್ಲಾ , ರುದ್ರಗೌಡ, ಕೃಷ್ಣ ಇದ್ದರು.