ಬಾದಾಮಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕದಂಬ ಸೈನ್ಯ ವತಿಯಿಂದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಸ್ಥಳ ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ರಾಜಾಧ್ಯಕ್ಷ ಬೇಕ್ರಿ ರಮೇಶ್, ಕಾರ್ಯದರ್ಶಿ ವಿನಾಯಕ ಸಂಡೂರ, ಜಿಲ್ಲಾಧ್ಯಕ್ಷ ಶಿವು ನಿಂಗಪ್ಪ ಇಸರಡ್ಡಿ, ರಾಜ್ಯ ಸಮಿತಿ ಸದಸ್ಯ ಬಸವನಗೌಡ ಪಾಟೀಲ್ ಮುಧೋಳ, ರವಿ ಹೊಸೂರ್ ಮತ್ತಿತರರಿದ್ದರು.
- ಕದಂಬ ಸೈನ್ಯದಿಂದ ತಹಸೀಲ್ದಾರ್‌ಗೆ ಮನವಿ
- ಇಮ್ಮಡಿ ಪುಲಿಕೇಶಿ , ಜಗಜ್ಯೋತಿ ಬಸವಣ್ಣನವರ ಮೂರ್ತಿಗಳ ಪ್ರತಿಷ್ಠಾಪನೆಗೆ ಸ್ಥಳ ನೀಡಲು ಆಗ್ರಹ
ಬಾದಾಮಿ: ಕೇಂದ್ರ ಸರ್ಕಾರದ ಹದಯ ಯೋಜನೆ ಅಡಿಯಲ್ಲಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಹಾಗೂ ಜಗಜ್ಯೋತಿ ಬಸವಣ್ಣನವರ ಮೂರ್ತಿಗಳನ್ನು ತಕ್ಷಣ ಪ್ರತಿಷ್ಠಾಪನೆ ಮಾಡಲು ಸ್ಥಳ ನೀಡಬೇಕು ಎಂದು ಆಗ್ರಹಿಸಿ ಕದಂಬ ಸೈನ್ಯ ವತಿಯಿಂದ ಶುಕ್ರವಾರ ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರಿಗೆ ಮನವಿ ಸಲ್ಲಿಸಿತು.
ಯೋಜನೆಯಡಿ ರೂ.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತ ಮೂರ್ತಿಗಳು ಕಳೆದ ಮೂರು ವರ್ಷಗಳಿಂದ ಸ್ಥಳಾವಕಾಶದ ಕೊರತೆಯಿಂದ ರಾಮದರ್ಗ ರಸ್ತೆ ಬಳಿ ನಿರ್ಲಕ್ಷೃದಿಂದ ಬಿದ್ದಿದ್ದು, ಮಳೆ-ಬಿಸಿಲಿನ ಪರಿಣಾಮದಿಂದ ಹಾನಿಯಾಗುತ್ತಿವೆ. ಸಮೀಪದ ಸಿಮೆಂಟ್ ಘಟಕದಿಂದ ಉಂಟಾಗುವ ಧೂಳಿನಿಂದ ಮತ್ತಷ್ಟು ಹಾನಿ ಉಂಟಾಗುತ್ತಿರುವುದಾಗಿ ಸಂಘಟನೆ ಆರೋಪಿಸಿದೆ.
ತಾಲೂಕು ಆಡಳಿತ ಮತ್ತು ಪುರಸಭೆ ಸ್ಥಳ ನೀಡದ ಕಾರಣದಿಂದ ಪ್ರತಿಷ್ಠಾಪನೆ ವಿಳಂಬವಾಗಿದ್ದು, ಇದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕದಂಬ ಸೈನ್ಯ ತಿಳಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮದರ್ಗ ವತ್ತದಲ್ಲಿ ಶಂಕುಸ್ಥಾಪನೆ ನೆರವೇರಿಸಿರುವುದನ್ನು ಸ್ವಾಗತಿಸಿದ ಸಂಘಟನೆ, ಈಗಿರುವ ಮೂರ್ತಿಗಳಿಗೆ ತಕ್ಷಣ ಸ್ಥಳ ಕಲ್ಪಿಸಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಕದಂಬ ಸೈನ್ಯ ರಾಜಾಧ್ಯಕ್ಷ ಬೇಕ್ರಿ ರಮೇಶ್, ಕಾರ್ಯದರ್ಶಿ ವಿನಾಯಕ ಸಂಡೂರ, ಜಿಲ್ಲಾಧ್ಯಕ್ಷ ಶಿವು ನಿಂಗಪ್ಪ ಇಸರಡ್ಡಿ, ರಾಜ್ಯ ಸಮಿತಿ ಸದಸ್ಯ ಬಸವನಗೌಡ ಪಾಟೀಲ್ ಮುಧೋಳ, ರವಿ ಹೊಸೂರ್, ಅಪ್ಪಣ್ಣ ಬಶೆಟ್ಟೆಪ್ಪ, ನೂರಂದಪ್ಪ ಬನಶಂಕರಿ, ವಿಜಯಪುರ ಜಿಲ್ಲೆ ಅಧ್ಯಕ್ಷ ಈರಯ್ಯ ಶಾಂತಯ್ಯ, ಆನಂದ ಸಂಗಪ್ಪ ಕಾಳಗಿ ವಿಜಯಪುರ, ಬಾದಾಮಿ ತಾಲೂಕು ಮುಖಂಡ ಮಹಾಂತೇಶ್ ಈರಯ್ಯ ಕಳೀಮಠ, ಪ್ರಕಾಶ್ ಹನುಮಂತ ನಾಲ್ವಡಿ, ಮಹೇಶ್ ಯಲಿಯೂರು, ಬಾಗಲಕೋಟೆ ತಾಲೂಕು ಅಧ್ಯಕ್ಷ ಕೈಲಾಶ್ ರಾ, ಹಂದ್ರಾಳ, ಮುಖಂಡ ಸಂಗಮೇಶ ಚೌದ್ರಿ ಹಾಗೂ ಪ್ರಮುಖರು ಭಾಗವಹಿಸಿದ್ದರು.